“ಲೈಫ್ಟೈಮ್ ಅದೃಷ್ಟವೇನಾದರೂ ಖುಲಾಯಿಸಿ ದೊಡ್ಡ ಮೊತ್ತದ ಲಾಟರಿಯೊಂದರ ಡ್ರಾನಲ್ಲಿ ನಮ್ಮ ಹೆಸರು ಬಂದುಬಿಟ್ಟರೆ?” ಎಂದು ಎಷ್ಟು ಜನರು ಅಂದುಕೊಳ್ಳುವುದಿಲ್ಲ?
ಆಸ್ಟ್ರೇಲಿಯಾದ ಬ್ರಿಸ್ಬೇನ್ನ ವಿದ್ಯಾರ್ಥಿಯೊಬ್ಬನಿಗೆ ಅಲ್ಲಿನ ಪವರ್ಬಾಲ್ ಲಾಟರಿ ಡ್ರಾನಲ್ಲಿ $20 ದಶಲಕ್ಷ ಬಹುಮಾನ ಸಿಕ್ಕಿದೆ. ಇಷ್ಟು ದೊಡ್ಡ ಮೊತ್ತವನ್ನು ಈ ವಿದ್ಯಾರ್ಥಿ ಏನು ಮಾಡುತ್ತಾನೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.
ತನ್ನ 20ರ ವಯೋಮಾನದಲ್ಲಿರುವ ಈ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಏನು ಮಾಡಬೇಕೆಂಬ ಸ್ಪಷ್ಟನೆ ಇಲ್ಲದ ಈತ ಈ ಬಗ್ಗೆ ಕೊಟ್ಟ ಉತ್ತರ ಬಹಳ ಇಂಟರೆಸ್ಟಿಂಗ್ ಆಗಿದೆ.
“ಜನರು ತಮ್ಮ ಜೀವನವನ್ನೆಲ್ಲಾ ದುಡಿಯುತ್ತಲೇ ಕಳೆಯುತ್ತಾರೆ. ಆದರೆ ನಾನು ನನ್ನ ಕುಟುಂಬ ಹಾಗೂ ಸ್ನೇಹಿತರನ್ನು ಹೀಗೆ ಮಾಡಲು ಬಿಡುವುದಿಲ್ಲ. ನಾನು ಅವರೆಲ್ಲರಿಗೂ ಅಚ್ಚರಿ ಪಡುವ ಮಟ್ಟದಲ್ಲಿ ಸಹಾಯ ಮಾಡುತ್ತೇನೆ. ಇವರಲ್ಲಿ ಅನೇಕರಿಗೆ ಈ ವರ್ಷ ಬಹಳ ಕಷ್ಟದ್ದಾಗಿದೆ” ಎಂದಿದ್ದಾನೆ.