OMG: ಮೇಯರ್ ಆಯ್ಕೆ ವೇಳೆ ಟೊಪ್ಪಿ ಬಳಕೆ….! 12-01-2021 12:59PM IST / No Comments / Posted In: Latest News, International ಸಾಮಾನ್ಯವಾಗಿ ಮೇಯರ್ಗಳನ್ನ ಬಹುಮತದ ಮೂಲಕ ಆಯ್ಕೆ ಮಾಡಲಾಗುತ್ತೆ. ಆದರೆ ಟೆಕ್ಸಾಸ್ ಹೌಟ್ಸನ್ ನಗರದಲ್ಲಿ ಟೊಪ್ಪಿಯೊಳಗಿದ್ದ ಚೆಂಡನ್ನ ಎತ್ತೋದ್ರ ಮೂಲಕ ಮೇಯರ್ ಆಯ್ಕೆ ಮಾಡಲಾಗಿದೆ. ಸೀನ್ ಸ್ಕಿಪ್ವರ್ಥ್ ಹಾಗೂ ಜೆನ್ನಿಫರ್ ಎಂಬವರು ಮೇಯರ್ ಸ್ಥಾನದ ರೇಸ್ನಲ್ಲಿದ್ದರು. ಆದರೆ ಇಬ್ಬರಿಗೂ 1,010 ಮತಗಳು ಬಂದಿದ್ದರಿಂದ ಟೆಕ್ಸಾಸ್ ನಿಯಮದ ಪ್ರಕಾರ ಮೇಯರ್ ಆಯ್ಕೆ ಮಾಡಲಾಗಿದೆ. ಸುಮಾರು 10 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರನ್ನ ಬರೆದಿದ್ದ ಚೆಂಡುಗಳನ್ನ ಟೊಪ್ಪಿಯೊಳಗೆ ಹಾಕಲಾಗಿತ್ತು. ಬಳಿಕ ಒಂದು ಚೆಂಡನ್ನ ತೆಗೆಯಲಾಗಿದ್ದು ಇದರಲ್ಲಿ ಸ್ಕಿಪ್ ವರ್ತ್ ಹೆಸರು ಇದ್ದಿದ್ದರಿಂದ ಅವರನ್ನೇ ಮೇಯರ್ ಎಂದು ಆಯ್ಕೆ ಮಾಡಲಾಗಿದೆ. ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಸ್ಕಿಪ್ವರ್ತ್, ನನಗೆ ಮತಚಲಾಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ರು. The answer is, indeed, a top hat Dickinson will select their mayor through a random draw at 7 p.m. @DegroodMatt is there.#GalvNews https://t.co/PGGUuwNEZf pic.twitter.com/FFxsWx6pW3 — John Wayne Ferguson (@JohnWFerguson) January 8, 2021