ಪೂರ್ವ ಲಂಡನ್ ನ ಅತ್ಯಂತ ಹಳೆಯ ಭಾರತೀಯ ರೆಸ್ಟೋರೆಂಟ್ ಎಂದೇ ಪ್ರಸಿದ್ಧವಾಗಿದ್ದ ಹಲಾಲ್ ರೆಸ್ಟೋರೆಂಟ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. 1939 ರಿಂದ ಲಂಡನ್ ನ ಮಂದಿಗೆ ಭಾರತೀಯ ರಸದೂಟ ಉಣಬಡಿಸಿ, ರುಚಿ ಹತ್ತಿಸಿರುವ ಹಲಾಲ್ ರೆಸ್ಟೋರೆಂಟ್, ಕೊರೊನಾ ಕಾಟದಿಂದ ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿದೆ.
ಗ್ರಾಹಕರನ್ನು ಸೆಳೆಯಲು ಏನನ್ನೂ ಮಾಡಲು ಸಾಧ್ಯವಾಗದ ರೆಸ್ಟೋರೆಂಟ್ ಮಾಲೀಕರ ಪುತ್ರಿ, ಟ್ವಿಟ್ಟರ್ ನಲ್ಲಿ ರೆಸ್ಟೋರೆಂಟ್ ನ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಗ್ರಾಹಕರಿಲ್ಲದೆ ಅನುಭವಿಸುತ್ತಿರುವ ಸಂಕಷ್ಟವನ್ನೂ ವಿವರಿಸಿದ್ದಾರೆ. ನಿಮ್ಮ ಪ್ರೀತಿ ತೋರಿಸಿ ಎಂಬ ಭಾವುಕ ವಿನಮ್ರಪೂರ್ವಕ ಸಂದೇಶವನ್ನೂ ಪೋಸ್ಟ್ ನಲ್ಲಿ ಹರಿಬಿಟ್ಟಿದ್ದಾರೆ. ಅನೇಕರು ರೆಸ್ಟೋರೆಂಟ್ ನ ರುಚಿಯನ್ನು ನೆನಪು ಮಾಡಿಕೊಂಡಿದ್ದು, ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.