ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಪೋಲಿಸರು ಹಲ್ಲೆ ನಡೆಸಿದ ಪರಿಣಾಮ ಅವರು ಮೃತರಾದ ಘಟನೆ ಮರೆಯುವ ಮೊದಲೇ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಹೌದು, ಜಾರ್ಜ್ ಸಾವಿಗೆ ನ್ಯಾಯ ಸಿಗಲಿ ಎಂದು ವಿಶ್ವಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಆದರೆ ಈ ಮಧ್ಯೆ 2019ರಲ್ಲಿ ಒಕ್ಲಾಮಾ ನಗರದಲ್ಲಿ ಕಪ್ಪು ವರ್ಣೀಯನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಈ ವೇಳೆ ಆತ, ಉಸಿರಾಡಲು ಆಗುತ್ತಿಲ್ಲ ಎಂದು ಹೇಳಿದರೂ ನಾನು ಕೇರ್ ಮಾಡುವುದಿಲ್ಲ ಎನ್ನುವ ಮಾತನ್ನು ಪೊಲೀಸ್ ಹೇಳಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಜಾರ್ಜ್ ವಿಷಯದಲ್ಲೂ ಪೊಲೀಸ್ ಇದೇ ರೀತಿ ವರ್ತಿಸಿದ್ದರು ಎನ್ನುವ ಆರೋಪವಿದೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದು, ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಗನ್ ತೋರಿಸಿ ಬೆದರಿಸಲು ಪ್ರಯತ್ನಿಸಿದ್ದ ಆದ್ದರಿಂದ ಆತನನ್ನು ಅಟ್ಟಿಸಿಕೊಂಡು ಹೋಗಲಾಗಿತ್ತು. ಕೆಲ ದೂರ ಹೋದ ಬಳಿಕ ಆತನನ್ನು ಹಿಡಿಯಲಾಗಿತ್ತು. ಆ ವೇಳೆಗೆ ಆತ ಮೂರ್ಛೆ ಹೋಗಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ. ಆದರೆ ಜಾರ್ಜ್ ರೀತಿಯಲ್ಲಿಯೇ ಈತನ ಮೇಲೂ ದಾಳಿ ನಡೆದಿರುವುದಕ್ಕೆ ಇದೀಗ ವಿವಾದವಾಗುತ್ತಿದೆ.