ಅಮೆರಿಕಾದ ಓಹಿಯೋದ ಮಿಡಲ್ ಬರ್ಕ್ ಹೈಟ್ಸ್ ನ ದಂಪತಿ ಆರ್ಡರ್ ಮಾಡಿದ್ದ ಪಿಜ್ಜಾ ವಿವಾದ ಸೃಷ್ಟಿಸಿದೆ.
ಪಿಜ್ಜಾ ಮೇಲ್ಭಾಗದಲ್ಲಿ ಪೇಪ್ಪಿರೋನಿಯಿಂದ ಸ್ವಸ್ತಿಕ್ ಚಿನ್ಹೆ ರಚಿಸಲಾಗಿತ್ತು, ಗ್ರಾಹಕರಾದ ಮಿಸ್ಟಿ ಲಾಸ್ಕಾ ಆರಂಭದಲ್ಲಿ ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಚಿತ್ರವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದನ್ನು ವಿಶ್ವದ ಮೂರನೇ ಅತಿದೊಡ್ಡ ಪಿಜ್ಜಾ ಮಾರಾಟಗಾರ ಸಂಸ್ಥೆ ಲಿಟಲ್ ಸೀಸರ್ ನಿಂದ ತರಿಸಿದ್ದಾಗಿ ಹೇಳಿಕೊಂಡರು.
ನಾಜಿ ಪಕ್ಷದ ಸಿಂಬಲ್ ಸ್ವಸ್ತಿಕ್, ಅದನ್ನು ಪಿಜ್ಜಾ ಮೇಲೆ ಬಳಸಿದ್ದಕ್ಕಾಗಿ ಕೋಪಗೊಂಡಾಕೆ ಪಿಜ್ಜಾ ಹಿಂದಿರುಗಿಸಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಮಳಿಗೆ ದಿನದ ವಹಿವಾಟು ಮುಗಿಸಿತ್ತು. ಮರುದಿನ ಕಂಪೆನಿಯೇ ಆಕೆಯನ್ನು ಸಂಪರ್ಕಿಸಿ ಕ್ಷಮೆಯಾಚಿಸಿತು. ಜೊತೆಗೆ ಉದ್ಯೋಗಿಗಳು ಪಿಜ್ಜಾವನ್ನು ತಮಾಷೆಯಾಗಿ ತೆಗೆದುಕೊಂಡು ತಯಾರಿಸಿದ್ದಾರೆ, ಇದು ಮಾರಾಟ ಯೋಗ್ಯವಲ್ಲ ಎಂದು ಹೇಳಿತು. ಅಷ್ಟೇ ಅಲ್ಲದೇ ಇಬ್ಬರು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.