ಮಾರಣಾಂತಿಕ ಕ್ಯಾನ್ಸರ್ ರೋಗಿಯ ನೋವು ನಿವಾರಿಸುವ ಸಲುವಾಗಿ ಶುಶ್ರೂಷಕಿಯೊಬ್ಬಳು ಸುಮಧುರ ಹಾಡಿನ ಮೂಲಕ ಪ್ರಯತ್ನಿಸಿದ್ದು, ಈ ವಿಡಿಯೋವೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಸೈಮನ್ ಬಿ ಆರ್ ಎಫ್ ಸಿ ಹಾಪ್ಕಿನ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಭಾವುಕ ವಿಡಿಯೋ ಶೇರ್ ಆಗಿದ್ದು, ಶುಶ್ರೂಷಕಿಯ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆಸ್ಪತ್ರೆಯೊಂದರಲ್ಲಿ ಕೊನೆಯ ಹಂತದ ಕ್ಯಾನ್ಸರ್ ನೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ಧ ರೋಗಿಯನ್ನು ನೋಡಿಕೊಳ್ಳಲು ಶುಶ್ರೂಷಕಿಯನ್ನು ನೇಮಿಸಲಾಗಿತ್ತು. ಎಷ್ಟೋ ಶುಶ್ರೂಷಕರು ಸ್ವಂತದವರ ಸೇವೆ ಎಂದೇ ಮಾಡುವುದುಂಟು. ಇಲ್ಲೂ ಹಾಗೇ ಆಗಿದೆ.
ಹಾಸಿಗೆ ಹಿಡಿದು ಮಲಗಿದ್ದ ಕ್ಯಾನ್ಸರ್ ಪೀಡಿತೆಯ ಪಕ್ಕದಲ್ಲಿ ಕುಳಿತ ನರ್ಸ್, ರೋಗಿಯ ಕೈಹಿಡಿದು ಹಾಡು ಹೇಳುತ್ತಾ, ಕಣ್ಣೀರಿಡುತ್ತಾಳೆ. ಆಕೆಯನ್ನು ಇನ್ನಷ್ಟು ಬಿಗಿಯಾಗಿ ಹಿಡಿದ ರೋಗಿ, ಕಂಬನಿ ತುಂಬಿದ ಕಣ್ಣುಗಳಿಂದ ಅವಳನ್ನೇ ದಿಟ್ಟಿಸಿ ನೋಡುತ್ತಾ, ಅವಳ ಹಾಡಿಗೆ ಧ್ವನಿಯಾಗುತ್ತಾರೆ.
https://twitter.com/HopkinsBRFC/status/1306292694092787714?ref_src=twsrc%5Etfw%7Ctwcamp%5Etweetembed%7Ctwterm%5E1306292694092787714%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fnurse-sings-to-woman-with-terminal-cancer-in-heartbreaking-video-internet-is-emotional-1722725-2020-09-17