ಕೊರೊನಾ ಬಿಕ್ಕಟ್ಟು ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವಿರುದ್ಧ ಹೋರಾಡಲು ದೇಶಗಳು ತಮ್ಮದೇ ರೀತಿಯ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ. ಆರೋಗ್ಯ ಸಚಿವಾಲಯಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡ್ತಿವೆ. ಈ ಮಧ್ಯೆ ಆಸ್ಟ್ರೇಲಿಯಾದ ಮಾರ್ಗಸೂಚಿ ಎಲ್ಲರ ಗಮನ ಸೆಳೆದಿದೆ.
ನ್ಯೂ ಸೌತ್ ವೇಲ್ಸ್ ನ ಆರೋಗ್ಯ ವೆಬ್ಸೈಟ್ ನಲ್ಲಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಕೊರೊನಾ ವೈರಸ್ ಕಾರಣ ಇಂಟಿಮೇಟ್ ಸಮಯದಲ್ಲಿ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗಿದೆ. ಮಲಗುವ ಕೋಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗಿದೆ. ಮೊದಲಿನಿಂದಲೂ ಒಟ್ಟಿಗೆ ಇರುವ ಜೋಡಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅಪರಿಚಿತರ ಜೊತೆ ಶಾರೀರಿಕ ಸಂಬಂಧ ಬೆಳೆಸುವವರಿಗೆ ಇದು ಅನ್ವಯಿಸಲಿದೆ.
ಕೊರೊನಾ ಸಂದರ್ಭದಲ್ಲಿ ಸೋಲೋ ಸೆಕ್ಸ್ ಬೆಸ್ಟ್ ಎಂದು ತಜ್ಞರು ಸಲಹೆ ನೀಡಿದ್ದಾರೆ. ಕಾಂಡೋಮ್ ಬಳಸುವುದು ಅನಿವಾರ್ಯವೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಸಂಗಾತಿಗೆ ಮುತ್ತಿಡುವ ವೇಳೆ ಮೂರು ಪದರದ ಮಾಸ್ಕ್ ಬಳಸಲು ಸಲಹೆ ನೀಡಲಾಗಿದೆ. ಸಂಗಾತಿಗಳು ದೂರದಲ್ಲಿದ್ದರೆ ಫೋನ್ ನಲ್ಲಿ ಸಂದೇಶ ಕಳುಹಿಸುವ ಮೂಲಕ ಅಥವಾ ವಿಡಿಯೋ ಕಾಲ್ ಮೂಲಕ ಹತ್ತಿರವಾಗಿ ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ವೀರ್ಯ ಹಾಗೂ ಯೋನಿ ದ್ರವದಿಂದ ವೈರಸ್ ಹರಡುವ ಬಗ್ಗೆ ಇನ್ನೂ ಪುರಾವೆಗಳು ಸಿಕ್ಕಿಲ್ಲ.