ನೀವೇನಾದರೂ ಸ್ಕೈಯಿಂಗ್ ಪ್ರಿಯರಾಗಿದ್ದರೆ ಸ್ಕೈಯಿಂಗ್ ಮಾಡೋ ವೇಳೆ ಯಾವ ರೀತಿಯ ಉಡುಗೆಯನ್ನ ಧರಿಸ್ತಾರೆ ಅನ್ನೋದರ ಬಗ್ಗೆಯೂ ನಿಮಗೆ ಮಾಹಿತಿ ಇರುತ್ತೆ.
ಬೂಟ್ಸ್, ಮೊಣಕಾಲು ರಕ್ಷಕ, ದಪ್ಪನೆಯ ಜಾಕೆಟ್, ಬ್ಯಾಕ್ಪ್ಯಾಕ್, ಕನ್ನಡಕ ಹಾಗೂ ಹೆಲ್ಮೆಟ್ನ್ನು ಸ್ಕೈಯಿಂಗ್ ಪಟುಗಳು ಧರಿಸ್ತಾರೆ.
ಆದರೆ ಅಮೆರಿಕದ ಎನ್ಆರ್ಐ ದಂಪತಿ ತಮ್ಮ ವಿಶಿಷ್ಟ ಬಗೆಯ ಸ್ಕೈಯಿಂಗ್ ಉಡುಪಿನ ಮೂಲಕವೇ ರಾತ್ರಿ ಬೆಳಗಾಗೋದ್ರಲ್ಲಿ ಸೋಶಿಯಲ್ ಮೀಡಿಯಾದ ಫೇಮಸ್ ಜೋಡಿಯಾಗಿ ಹೆಸರು ಮಾಡಿದ್ದಾರೆ.
ದಿವ್ಯಾ ಹಾಗೂ ಮಧು ಮಿನ್ನೆಸೋಟಾದ ಪ್ರಖ್ಯಾತ ಸ್ಥಳವೊಂದರಲ್ಲಿ ಸ್ಕೈಯಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿ ಅವರು ಸ್ಕೈಯಿಂಗ್ ಮಾಡಲು ಎಲ್ಲರೂ ಧರಿಸುವಂತಹ ಧಿರಿಸನ್ನ ಧರಿಸಿರಲಿಲ್ಲ. ಬದಲಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆ ಹಾಗೂ ಧೋತಿಯನ್ನ ಧರಿಸಿದ್ರು.
ಸಾಂಪ್ರದಾಯಿಕ ಉಡುಗೆಯನ್ನ ಧರಿಸಿರುವ ದಿವ್ಯಾ ಹಾಗೂ ಮಧು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ . ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ದಿವ್ಯಾ ನಾವು ಕ್ರೇಜಿಯಾಗಿ ಏನಾದರೂ ಮಾಡೋಕೆ ಪ್ಲಾನ್ ಮಾಡಿದ್ದೆವು ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
https://www.instagram.com/p/CKsUTw-n-FW/?utm_source=ig_web_copy_link