alex Certify ಕೊರೊನಾ ಕುರಿತಂತೆ ಮತ್ತೊಂದು ಶಾಕಿಂಗ್ ನ್ಯೂಸ್: ಚರ್ಮದ ಮೇಲೆ ಬರೋಬ್ಬರಿ 9 ಗಂಟೆ ಇರುತ್ತೆ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕುರಿತಂತೆ ಮತ್ತೊಂದು ಶಾಕಿಂಗ್ ನ್ಯೂಸ್: ಚರ್ಮದ ಮೇಲೆ ಬರೋಬ್ಬರಿ 9 ಗಂಟೆ ಇರುತ್ತೆ ವೈರಸ್

ನವದೆಹಲಿ: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ.

ಕೊರೋನಾ ವೈರಸ್ ಮನುಷ್ಯರ ಚರ್ಮದ ಮೇಲೆ 9 ಗಂಟೆಗಳ ಕಾಲ ಬದುಕಿರುತ್ತದೆ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಜಪಾನ್ ನ ಕ್ಯೂಟೋ ಪ್ರಿ ಫ್ರೆಕ್ಚುರಲ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕೈಗೊಂಡ ಅಧ್ಯಯನದಲ್ಲಿ ಕೊರೋನಾ ವೈರಸ್ ಮನುಷ್ಯರ ಚರ್ಮದ ಮೇಲೆ ಬರೋಬ್ಬರಿ 9 ಗಂಟೆಗಳ ಕಾಲ ಬದುಕಿರುತ್ತದೆ ಎನ್ನುವುದು ಗೊತ್ತಾಗಿದೆ.

ಸಾಮಾನ್ಯ ಜ್ವರಕ್ಕೆ ಕಾರಣವಾಗುವ ಇನ್ ಫ್ಲುಯೆಂಜಾ ಎ ವೈರಸ್ ಎರಡು ತಾಸು ಮನುಷ್ಯರ ಮೇಲೆ ಬದುಕಿರುತ್ತದೆ. ಕೊರೋನಾ ವೈರಸ್ 9 ಗಂಟೆಗಳ ಕಾಲ ಚರ್ಮದ ಮೇಲೆ ಇರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.

ಸ್ಯಾನಿಟೈಸರ್ ಬಳಕೆಯಿಂದ ವೈರಸ್ ನಿಷ್ಕ್ರಿಯವಾಗುತ್ತವೆ. ಆಗಾಗ ಕೈ ತೊಳೆಯುವುದರಿಂದ. ಸ್ಯಾನಿಟೈಸರ್ ಬಳಕೆಯಿಂದ ಕೊರೊನಾದಿಂದ ಪಾರಾಗಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...