ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಸಿಎಸ್ಐಆರ್ಒ ಕೊರೊನಾ ವೈರಸ್ ಬಗ್ಗೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದೆ. ಕೆಲ ವಸ್ತುಗಳ ಮೇಲೆ ಕೊರೊನಾ 28 ದಿನಗಳ ಕಾಲ ಜೀವಂತವಾಗಿರಬಹುದೆಂದು ಹೇಳಲಾಗಿದೆ.
20 ಡಿಗ್ರಿ ವಾತಾವರಣದಲ್ಲಿ SARS-COV-2 ವೈರಸ್, ಮೊಬೈಲ್ ಫೋನ್ ಪರದೆಗಳು, ನೋಟ್ಸ್ ಗಾಜಿನಂತಹ ಮೇಲ್ಮೈಗಳಲ್ಲಿ 28 ದಿನಗಳವರೆಗೆ ಜೀವಂತವಾಗಿರುತ್ತದೆ. ಇನ್ಫ್ಲುಯೆನ್ಸ ಎ ವೈರಸ್ 17 ದಿನಗಳವರೆಗೆ ಜೀವಂತವಾಗಿರಬಲ್ಲದು.
20, 30 ಮತ್ತು 40 ಡಿಗ್ರಿ ತಾಪಮಾನದಲ್ಲಿ ನಡೆಸಿದ ಪ್ರಯೋಗಗಳು ಶೀತ ತಾಪಮಾನದಲ್ಲಿ ವೈರಸ್ ದೀರ್ಘಕಾಲ ಜೀವಂತವಾಗಿದೆ ಎಂಬುದನ್ನು ತೋರಿಸಿದೆ. ನಯವಾದ ಮೇಲ್ಮೈಗಳು ಮತ್ತು ಪ್ಲಾಸ್ಟಿಕ್ ಗಿಂತ ಕಾಗದದ ನೋಟಿನ ಮೇಲೆ ವೈರಸ್ ಹೆಚ್ಚು ಕಾಲ ಜೀವಂತವಾಗಿರುತ್ತದೆ. ನೇರಳಾತೀತ ಬೆಳಕಿನ ಪರಿಣಾಮವನ್ನು ತೆಗೆದುಹಾಕಲು ಈ ಎಲ್ಲಾ ಪ್ರಯೋಗಗಳನ್ನು ಕತ್ತಲೆಯಲ್ಲಿ ಮಾಡಲಾಯಿತು, ಏಕೆಂದರೆ ನೇರ ಸೂರ್ಯನ ಬೆಳಕು ವೈರಸ್ ಕೊಲ್ಲುತ್ತದೆ ಎಂದು ಸಂಶೋಧನೆ ಹೇಳಿದೆ.
ಸೋಂಕು ನಿಯಂತ್ರಣಕ್ಕೆ ಪದೇ ಪದೇ ಕೈ ತೊಳೆಯುವುದು, ಸ್ಯಾನಿಟೈಜರ್ ಬಳಕೆಗೆ ಇನ್ನಷ್ಟು ಮಹತ್ವ ನೀಡಬೇಕೆಂದು ತಜ್ಞರು ಹೇಳಿದ್ದಾರೆ.