ಕರೊನಾ ಮಹಾಮಾರಿ ಇಡೀ ವಿಶ್ವದ ಜನತೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿ ಹಾಕಿದೆ. ದೊಡ್ಡ ಕಂಪನಿಗಳಲ್ಲಿ ವರ್ಕ್ ಮಾಡ್ತಿದ್ದವರು ಇದೀಗ ಮನೆಯಲ್ಲಿ ಕೆಲಸ ಮಾಡೋ ಹಾಗೇ ಮಾಡಿದೆ. ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ನಲ್ಲಿ ಬ್ಯುಸಿ ಆಗಿದ್ದಾರೆ.
ಇಷ್ಟೇ ಅಲ್ಲದೇ ಈ ವರ್ಷ ಮದುವೆ ಆಗಬೇಕು ಅಂತಾ ಹೊರಟವರಿಗೂ ಕೂಡ ಫ್ಯಾಮಿಲಿ ಹಾಗೂ ಫ್ರೆಂಡ್ಸ್ಗಳನ್ನ ಆಹ್ವಾನಿಸೋ ಭಾಗ್ಯವಿಲ್ಲ. ಆದರೆ ಕೆನಡಾದ ನವ ಜೋಡಿಯೊಂದು ತಮ್ಮ ಮದುವೆಗೆ ಎಲ್ಲರನ್ನೂ ಕರೆಸಬೇಕು ಅಂತಾ ಭರ್ಜರಿ ಪ್ಲಾನ್ ಮಾಡಿ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ.
ಲಿನ್ಸೇ ಕ್ಲೌಸ್ ಹಾಗೂ ಅಲೆಕ್ಸ್ ಅಮೆರಿಕ ಹಾಗೂ ಕೆನಡಾ ಗಡಿಯಲ್ಲಿ ಬರುವ ನದಿ ದಡದಲ್ಲಿ ಮದುವೆ ಏರ್ಪಡಿಸಿದ್ದಾರೆ. ಹೀಗಾಗಿ ಅಮೆರಿಕನ್ ಕುಟುಂಬಸ್ಥರು ಅಮೆರಿಕ ನದಿ ದಡದಲ್ಲಿ ನಿಂತು ಮದುವೆ ನೋಡಿದ್ರೆ…..ಕೆನಡಾದ ಸಂಬಂಧಿಗಳು ಕೆನಡಾ ನದಿ ದಡದಲ್ಲಿ ನಿಂತು ಮದುವೆಗೆ ಸಾಕ್ಷಿಯಾಗಿದ್ದಾರೆ.
ಕೆನಡಾದಲ್ಲಿ ಮದುವೆಯಾಗಬೇಕು ಅಂತಾ ಪ್ಲಾನ್ ಮಾಡಿದ್ದ ಈ ದಂಪತಿ ಕರೊನಾ ಮಹಾಮಾರಿಯಿಂದಾಗಿ ಈ ಹೊಸ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಂತು ಹೊಸ ಜೀವನಕ್ಕೆ ಈ ದಂಪತಿ ಕಾಲಿಟ್ಟಿದೆ.