
ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಮಹಿಳೆಯನ್ನ ಅಶ್ಲಿ ಬಾಬಿಟ್ ಎಂದು ಗುರುತಿಸಲಾಗಿದೆ. ಇವರು ಅಮೆರಿಕ ವಾಯುಸೇನೆಯ ಹಿರಿಯ ಅಧಿಕಾರಿಯಾಗಿದ್ದರು ಎಂದು ಪತ್ರಿಕಾ ವರದಿಗಳು ಮಾಹಿತಿ ನೀಡಿವೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲಿನ ಬಳಿಕ ಸಾಮಾಜಿಕ ಜಾಲತಾಣ ಹಾಗೂ ಹೇಳಿಕೆಗಳಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಆಕ್ರೋಶ ಇದೀಗ ಹಿಂಸಾಚಾರದ ಮಟ್ಟಕ್ಕೆ ಬಂದು ನಿಂತಿದೆ. ಕ್ಯಾಪಿಟಲ್ ಕಟ್ಟಡದಲ್ಲಿ ಟ್ರಂಪ್ ಬೆಂಬಲಿಗರು ದಾಂಧಲೆ ಶುರುವಿಡುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಆದರೆ ಇದಕ್ಕೂ ಅಂಜದ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡಕ್ಕೇ ಬೆಂಕಿ ಹಚ್ಚಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪೊಲೀಸರು ಗುಂಪನ್ನ ಚದುರಿಸಲು ಗುಂಡು ಹಾರಿಸಿದರು. ಈ ವೇಳೆ ಸಾವನ್ನಪ್ಪಿದವರಲ್ಲಿ ಮೊದಲನೇಯವರು ಅಶ್ರು ಬಾಬಿಟ್. ನಾಲ್ಕು ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಟ್ರಂಪ್ರ ಬಲವಾದ ಬೆಂಬಲಿಗರಾಗಿದ್ದರು ಅಂತಾ ದಕ್ಷಿಣ ಕ್ಯಾಲಿಫೋರ್ನಿಯಾದ ಪತ್ರಿಕೆಗಳು ವರದಿ ಮಾಡಿದೆ.
ಈಕೆ ಸಾವನ್ನಪ್ಪುವ ಒಂದು ದಿನದ ಮುಂಚೆ ಅಂದರೆ ಮಂಗಳವಾರದಂದು ಅಶ್ರ ಬಾಬಿಟ್ ಮಾಡಿದ ಟ್ವೀಟ್ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಟ್ವೀಟ್ನಲ್ಲಿ ಬಾಬಿಟ್, ಯಾವುದರ ಮೂಲಕವೂ ನಮ್ಮನ್ನ ತಡೆಯೋಕೆ ಸಾಧ್ಯವಿಲ್ಲ . ಅವರು ಪ್ರಯತ್ನ ಮಾಡುತ್ತಲೇ ಇರ್ತಾರೆ. ಆದರೆ ಬಿರುಗಾಳಿ ಇಲ್ಲಿದೆ. ಹಾಗೂ ಈ ಬಿರುಗಾಳಿ 24 ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಡಿಸಿಗೆ ಬರಲಿದೆ. ಕತ್ತಲೆಯಿಂದ ಬೆಳಕಿನವರೆಗೆ…! ಎಂದು ಬರೆದಿದ್ದಾರೆ.