ಪ್ಯಾಲಿಸ್ತೀನ್‌ನ ಕಾನೂನು ವಿದ್ಯಾರ್ಥಿ ಯೂಸೆಫ್ ಅಬು ಅಮಿರಾ ಅವರು ತಮ್ಮ ಅಂಗವೈಕಲ್ಯವನ್ನು ಎಂದಿಗೂ ತೊಂದರೆಯೆಂದು ಪರಿಗಣಿಸಲೇ ಇಲ್ಲ.
ಕಾಲುಗಳಿಲ್ಲದೇ ಜನಿಸಿದ ಯೂಸೆಫ್‌ರ ಕೈಗಳು ಭಾಗಶಃ ಮಾತ್ರವೇ ಬೆಳೆದಿದ್ದರೂ ಸಹ ಕರಾಟೆ ಕಲಿಯಲು ನಿರ್ಧರಿಸಿ, ಅದರಲ್ಲೇ ಸಾಧನೆಗೈದಿದ್ದಾರೆ. 24 ವರ್ಷದ ಈತ ಆರೆಂಜ್ ಬೆಲ್ಟ್‌ಧಾರಿಯಾಗಿದ್ದು, ಗಾಝಾದ ಅಲ್ ಮಶ್ತಾಲ್ ಕ್ಲಬ್‌ನಲ್ಲಿ ಸ್ಟಿಕ್-ಫೈಟಿಂಗ್ ಕಲಿತಿದ್ದಾರೆ.
“ಅಂಗವೈಕಲ್ಯ ಎನ್ನುವುದು ಮನಸ್ಸಿನಲ್ಲಿ ಇದೆಯೇ ಹೊರತು ದೇಹದಲ್ಲಿ ಅಲ್ಲ ಮತ್ತು ಯಾವುದೂ ಸಹ ಅಸಾಧ್ಯವಲ್ಲ ಎಂದು ನಾನು ಜಗತ್ತಿಗೆ ತೋರಲು ಇಷ್ಟ ಪಡುತ್ತೇನೆ. ನಾನು ಕರಾಟೆ ಕಲಿಯುವ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಳಲು ಕಲಿಯುವುದಲ್ಲದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಇಚ್ಛಿಸುತ್ತೇನೆ,” ಎನ್ನುತ್ತಾರೆ ಯೂಸೆಫ್.
ಸ್ಟಿಕ್ ಫೈಟಿಂಗ್ ಮೂಲಕ ತಮ್ಮ ಕೈ-ಕಾಲುಗಳು ಕೊರತೆ ನೀಗಿಸಿಕೊಳ್ಳುವ ಯೂಸೆಫ್, ಈ ಮೂಲಕ ಸ್ಟ್ರಾಂಗ್ ಪಂಚ್‌ಗಳನ್ನು ಕೊಡುವ ಮೂಲಕ ಈ ಮಾರ್ಷಿಯಲ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.