ಕೆಲವರಿಗೆ ಆಹಾರಗಳನ್ನ ಬಹಳ ಸಮಯದವರೆಗೆ ಸಂಗ್ರಹಿಸಿ ಅದು ಹೇಗೆ ಕಾಣುತ್ತೆ ಅಂತಾ ನೋಡುವ ಅಭ್ಯಾಸ ಇರುತ್ತೆ. ಕೆಲವರು ವಾರಗಟ್ಟಲೇ ಆಹಾರಗಳನ್ನ ಸಂಗ್ರಹಿಸಿ ಇಟ್ಟರೆ ಇನ್ನು ಕೆಲವರು ತಿಂಗಳುಗಟ್ಟಲೇ ಆಹಾರವನ್ನ ಕಾಯ್ದಿರಿಸುವ ಅಭ್ಯಾಸ ಹೊಂದಿದ್ದಾರೆ.
ಆದರೆ ಟಿಕ್ಟಾಕ್ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಸವನ್ನಾ ವೈಟ್ಹೆಡ್ ಎಂಬ ಹೆಸರಿನ ಅಮೆರಿಕಾದ ಮಹಿಳೆಯೊಬ್ಬರು ದೀರ್ಘ ಕಾಲದವರೆಗೆ ಮೆಕ್ಡೊನಾಲ್ಡ್ನ ಬರ್ಗರ್ ಹಾಗೂ ಫ್ರೆಂಚ್ ಫ್ರೈಸ್ನ್ನ ಸಂಗ್ರಹಿಸಿ ಇಡೋದ್ರ ಮೂಲಕ ಸಖತ್ ವೈರಲ್ ಆಗಿದ್ದಾರೆ.
ಈ ಮಹಿಳೆ ಮೆಕ್ಡೊನಾಲ್ಡ್ನ ಚೀಸ್ ಬರ್ಗರ್ ಹಾಗೂ ಫ್ರೆಂಚ್ ಫ್ರೈಸ್ಗಳನ್ನ ಬರೋಬ್ಬರಿ 17 ವರ್ಷದವರೆಗೆ ಸಂಗ್ರಹಿಸಿ ಇಟ್ಟಿದ್ದಾರೆ. ಈಕೆ ಈ ಎಲ್ಲಾ ತಿನಿಸುಗಳನ್ನ 2004ರಲ್ಲಿ ಖರೀದಿ ಮಾಡಿದ್ದರಂತೆ.
17 ವರ್ಷ ಹಿಂದಿನ ಈ ಆಹಾರ ಹೇಗೆ ಕಾಣುತ್ತೆ ಅಂತಾ ಅನೇಕರು ಕುತೂಹಲದಲ್ಲಿ ಇರುವಾಗಲೇ ಮಹಿಳೆ ಈ ತಿಂಡಿಯ ಪೊಟ್ಟಣವನ್ನ ತೆರೆದಿದ್ದಾರೆ. ಫ್ರೆಂಚ್ ಫ್ರೈಸ್ ನೋಡಲು ಸಹಜವಾಗಿಯೇ ಇದ್ದರೆ ಬರ್ಗರ್ ಗಟ್ಟಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://youtu.be/2PoR7PGIudY?t=1