ಸಾಕು ಪ್ರಾಣಿಗಳಿಗೆ ಹೊಸ ಟ್ರಿಕ್ಗಳು ಹಾಗೂ ಸ್ಟಂಟ್ಗಳನ್ನು ಕಲಿಸುವುದು ಒಂಥರಾ ಫನ್ನಿ ಅನುಭವ.
ಸಾಮಾನ್ಯವಾಗಿ ನಾಯಿಗಳಿಗೆ ಅಡೆತಡೆಗಳ ಮೇಲೆ ಜಂಪ್ ಮಾಡುವುದು, ಹೂಲಾ ಹೂಪ್ಗಳನ್ನು ಮಾಡಿಸುವುದು, ಚೆಂಡಿನೊಂದಿಗೆ ಆಟವಾಡುವಂಥ ಕಲೆಗಳನ್ನು ಕೈ ಸನ್ನೆ ಮೂಲಕ ಕಲಿಸಬಹುದಾಗಿದೆ.
ಇಲ್ಲೊಬ್ಬರು ತಮ್ಮ ಸಾಕುನಾಯಿಗೆ ತನ್ನ ತಲೆಯನ್ನು 180 ಡಿಗ್ರಿಯಷ್ಟು ತಿರುಗಿಸುವುದನ್ನು ಕಲಿಸಿದ್ದಾರೆ.
ಆಶ್ಲೈ ಮ್ಯಾಕ್ಫರ್ಸನ್ ಹೆಸರಿನ ಈ ಯಜಮಾನಿ ತಮ್ಮ ಫಿನ್ನಿಶ್ ಸ್ಪಿಟ್ಜ್ ನಾಯಿ ಕಿಕೋಗೆ ಈ ಸ್ಟಂಟ್ ಕಲಿಸಿದ್ದು, ಕಿಕೋನೋ ಫೋಟೋಗಳಲ್ಲಿ ಆಕೆಯ ಈ ವಿಶಿಷ್ಟ ಸ್ಟಂಟ್ಗಳನ್ನು ನೋಡುವುದೇ ಮಜವಾಗಿದೆ.
https://youtu.be/Qxapve7SF24