ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ ಒಬ್ಬರ ಕೈಯಲ್ಲಿ ನಾಯಿ ಇತ್ತು. ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ ನಾಯಿ ಮಾಲೀಕ ಗನ್ ಹಿಡಿದು ಹೆದರಿಸಿದ್ದಾನೆ. ಕೂಡಲೇ ಅಲ್ಲಿಂದ ಹೊರಟು ಹೋದ ಇನ್ನೊಬ್ಬ ಪಿಸ್ತೂಲ್ ಹಾಗೂ ಇನ್ನೂ ಹಲವರನ್ನ ಕರೆದುಕೊಂಡು ಬಂದಿದ್ದಾನೆ.
ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು 8 ಮಂದಿ ಗಾಯಗೊಂಡಿದ್ದಾರೆ. ಆದರೆ ಯಾರೂ ಕೂಡ ಗಂಭೀರ ಸ್ಥಿತಿಯಲ್ಲಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಬಂದೂಕನ್ನ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.