ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ರೆ ಜಾರಿ ಬೀಳೋದು ಪಕ್ಕಾ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೇ. ಆದರೆ ಕಾರುಗಳಿಗೂ ಈ ಮಾತು ಅನ್ವಯವಾಗುತ್ತಾ..? ಅಂತಾ ಕೇಳಿದ್ರೆ ನಿಮ್ಮ ಬಳಿ ಉತ್ತರ ಇಲ್ಲದೇ ಇರಬಹುದು. ಹೀಗಾಗಿಯೇ ಯುಟ್ಯೂಬರ್ ಒಬ್ಬರು ಈ ವಿಚಾರವಾಗಿ ಒಂದು ಸಣ್ಣ ಅನ್ವೇಷಣೆ ಮಾಡಿದ್ದಾರೆ.
ದಿ ಆಕ್ಷನ್ ಲ್ಯಾಬ್ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಪಿ.ಹೆಚ್.ಡಿ. ಮಾಡಿ ಆರ್ & ಡಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿರುವ ಯುಟ್ಯೂಬರ್ ಜೇಮ್ಸ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
8 ನಿಮಿಷದ ವಿಡಿಯೋದಲ್ಲಿ ಬಾಳೆಹಣ್ಣುಗಳ ಸಿಪ್ಪೆ ಯಾಕೆ ಜಾರುತ್ತೆ ಅನ್ನೋದಕ್ಕೆ ವಿವರಣೆ ನೀಡಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪ್ರೋಟಿನ್ ಹಾಗೂ ಪಾಲಿಸೆಕರೈಡ್ಗಳು ದ್ರವ ಮಾದರಿಯಲ್ಲಿದ್ದು ಇದರಿಂದಲೇ ಬಾಳೆಹಣ್ಣಿನ ಸಿಪ್ಪೆಯನ್ನ ಮೆಟ್ಟಿದ್ದರೆ ನಾವು ಜಾರುತ್ತೇವೆ ಎಂದು ಹೇಳಿದ್ದಾರೆ.
ಟ್ರ್ಯಾಕ್ನಲ್ಲಿ ಬಾಳೆಹಣ್ಣುಗಳ ಸಿಪ್ಪೆಯನ್ನ ಎಸೆದು ಕಾರನ್ನ ಚಲಾಯಿಸಿದ್ದಾರೆ. ಒಂದೆರಡು ಸಿಪ್ಪೆಯ ಮೇಲೆ ಕಾರಿನ ಚಕ್ರ ಜಾರಿಲ್ಲ. ಆದರೆ ರಾಶಿ ರಾಶಿ ಸಿಪ್ಪೆಗಳ ಮೇಲೆ ಹೋಗುವಾಗ ಕಾರಿನ ಚಕ್ರ ನಿಯಂತ್ರಣ ತಪ್ಪೋದನ್ನ ನೀವು ಕಾಣಬಹುದಾಗಿದೆ.