
ಕೊಚ್ಚಿಯ ಚಂಬಕ್ಕಾರದ ವಿನ್ಸೆಂಟ್ ಕ್ಸೇವಿಯರ್ ಇದರ ನೇತೃತ್ವ ವಹಿಸಿದ್ದರಂತೆ. ಇವರು ಟ್ರಂಪ್ಗೆ ಬೆಂಬಲ ಪ್ರದರ್ಶಿಸಲು ತ್ರಿವರ್ಣ ಧ್ವಜ ಪ್ರದರ್ಶನ ಮಾಡಿದ್ದಾರೆ. ಆದರೆ ಕ್ಯಾಪಿಟಲ್ ಕಟ್ಟಡದ ಹಿಂಸಾಚಾರದಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ವಿನ್ಸೆಂಟ್ ಕ್ಸೇವಿಯರ್ ಹೇಳಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ವರ್ಜಿನೀಯಾದ ರಾಜ್ಯ ಕೇಂದ್ರ ಸಮಿತಿ ಸದಸ್ಯರಾಗಿದ್ದರು ವಿನ್ಸೆಂಟ್ ಕ್ಸೇವಿಯರ್. ಭಾರತೀಯ ಮೂಲದ 10 ಮಂದಿ ಜೊತೆ ಸೇರಿ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದೇನೆ ಎಂದು ಹೇಳಿದ್ರು. ಅಮೆರಿಕ ಮತದಾನದಲ್ಲಿ ಭಾರೀ ವಂಚನೆ ನಡೆದಿದೆ ಎಂದು ಭಾವಿಸಿದ್ದ ಅಮೆರಿಕ ದೇಶಭಕ್ತರು ಒಗ್ಗಟ್ಟಿನಿಂದ ಬುಧವಾರ ರ್ಯಲಿಯಲ್ಲಿ ಭಾಗಿಯಾಗಿದ್ರು. ನಾನು ಕೂಡ ಅವರೊಟ್ಟಿಗೆ ಹೋದೆ. ಅಲ್ಲಿ ಕೇವಲ ಭಾರತ ಮಾತ್ರವಲ್ಲದೇ ಪಾಕ್ ಧ್ವಜಗಳೂ ಪ್ರದರ್ಶನಗೊಂಡಿದೆ. ಆದರೆ ಶಾಂತಿಯುತ ಪ್ರತಿಭಟನೆ ನಮ್ಮ ಉದ್ದೇಶವಾಗಿತ್ತು. ಯಾರೋ ದುಷ್ಕರ್ಮಿಗಳು ಒಳಗೆ ನುಸುಳಿ ಈ ಸಮಸ್ಯೆ ಸೃಷ್ಟಿಸಿರಬಹುದು ಅಂತ ವಿನ್ಸೆಂಟ್ ಕ್ಸೇವಿಯರ್ ಶಂಕಿಸಿದ್ದಾರೆ.