ಶೇಡ್ ಅಜಯಿ ಎಂಬ ಮಹಿಳೆ ತನ್ನ ಮಧ್ಯ ವಯಸ್ಸಿನವರೆಗೂ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಈ ಮಹಿಳೆಗೆ 50 ವರ್ಷ ವಯಸ್ಸಾಗಿದ್ದು ತನಗಿಂತ ನಾಲ್ಕು ದಶಕಗಳಷ್ಟು ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ತರಗತಿಯಲ್ಲಿ ಕೂತು ಓದಲು – ಬರೆಯಲು ಕಲಿಯುತ್ತಿದ್ದಾಳೆ.
ಎಲ್ಲಾ ವಿದ್ಯಾರ್ಥಿಗಳಂತೆ ಗುಲಾಬಿ ಬಣ್ಣದ ಸಮವಸ್ತ್ರ ಧರಿಸಿ ನೈಜಿರಿಯಾದ ಪಶ್ಚಿಮ ಕ್ವಾರಾ ರಾಜ್ಯದ ಐಲೋರಿನ್ನ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಈ ವಯಸ್ಸಿನಲ್ಲಿ ಸಮವಸ್ತ್ರ ಧರಿಸುತ್ತಿರೋದಕ್ಕೆ ನನಗೆ ಯಾವುದೇ ಮುಜುಗರ ಇಲ್ಲ ಎಂದು ಶೇಡ್ ಹೇಳಿದ್ದಾರೆ.
ಚಿಕ್ಕವಳಿದ್ದಾಗ ಈಕೆ ಶಾಲೆಗೆ ಹೋಗೋದ್ರ ಬದಲು ಅತ್ತೆಯ ಅಂಗಡಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಬಂದೊದಗಿತ್ತು. ಹೀಗಾಗಿ ಈಕೆ ಸದ್ಯ ಪರ್ಸ್ ಹಾಗೂ ಬ್ಯಾಗ್ಗಳನ್ನ ಮಾರಾಟ ಮಾಡುವ ಅಂಗಡಿಯನ್ನ ನಡೆಸುತ್ತಿದ್ದಾರೆ.
ಆದರೆ ಈಕೆ ಅನಕ್ಷರಸ್ಥೆ ಆಗಿದ್ದರಿಂದ ಉದ್ಯಮದಲ್ಲಿ ಹೆಚ್ಚು ಮುಂದುವರಿಯಲು ಸಾಧ್ಯವಾಗ್ತಿರಲಿಲ್ಲ. ಕಳೆದ ವರ್ಷವೇ ಅಜಯಿ ಶಾಲೆಗೆ ಸೇರುವವರಿದ್ದರು. ಆದರೆ ಕೊರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಶಾಲೆಗಳು ಆರಂಭವಾಗಿದ್ದು, ಅಜಯಿ ಕೂಡ ಓದು, ಬರೆಯೋದನ್ನ ಕಲೀತಿದ್ದಾರೆ.