ಹವಾನಾ: ‘ಪ್ಯಾರೀಸ್ ಆಫ್ ಕೆರೇಬಿಯನ್’ ಎಂದು ಕರೆಸಿಕೊಳ್ಳುವ ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲೂ ಐಫೆಲ್ ಟವರ್ ಒಂದು ತಲೆ ಎತ್ತಿದೆ.
ಪ್ಯಾರೀಸ್ ನಲ್ಲಿರುವ ಐಫೆಲ್ ಟವರನ್ನು ಪಕ್ಕಾ ಹೋಲುವಂತೆಯೇ ಇದ್ದು, ಅದಕ್ಕಿಂತ ಚಿಕ್ಕದಾಗಿದೆಯಷ್ಟೆ.
ಜಾರ್ಜ್ ಎನ್ರಿಕ್ ಸಾಲ್ಗದೊ ಎಂಬ ಅಕೌಂಟೆಂಟ್ 13 ಅಡಿಯ ಈ ಟವರ್ ನಿರ್ಮಾಣ ಮಾಡಿದ್ದಾರೆ. ಅದರ ತುತ್ತ ತುದಿಯಲ್ಲಿ ಕಾರಿನ ಹೆಲೋಜಿನ್ ಲೈಟ್ ಅಳವಡಿಸಿದ್ದಾರೆ.
ಜಾರ್ಜ್ ಎಂದೂ ಐಫೆಲ್ ಟವರ್ ನೋಡಿದವರಲ್ಲ. ಇಂಟರ್ ನೆಟ್ ನಿಂದ ಚಿತ್ರ ಹಾಗೂ ಯೋಜನೆ ಡೌನ್ ಲೋಡ್ ಮಾಡಿಕೊಂಡು ತಂದೆಯ ಬಳಿ ಹಣ ಪಡೆದು ಕಬ್ಬಿಣದ ಟವರ್ ನಿರ್ಮಿಸಿದ್ದಾರೆ.
ಗುಡ್ಡದ ಮೇಲೆ ಅದನ್ನು ಇಟ್ಟಿದ್ದು, ಪ್ರವಾಸಿ ತಾಣವಾಗಲು ಇದು ಅರ್ಹವಾಗಿದೆ ಎಂದು ಹಲವರು ಹೇಳಿದ್ದಾರೆ. ಆದರೆ, ಜಾರ್ಜ್ ಟವರ್ ನಿರ್ಮಿಸಿದ್ದು ಪ್ರವಾಸಿ ತಾಣ ಮಾಡಲು ಅಲ್ಲ. ತಮ್ಮ ಮನೆ ಹಾಗೂ ಸುತ್ತಲಿನ ಪ್ರದೇಶಗಳಿಗೆ ಇಂಟರ್ನೆಟ್ ಸರಿಯಾಗಿ ಬರುತ್ತಿರಲಿಲ್ಲ. ಇಂಟರ್ನೆಟ್ ವೇಗ ವೃದ್ಧಿಸಲು ಇದನ್ನು ತಯಾರಿಸಿದ್ದೇನೆ ಎಂದಿದ್ದಾರೆ.