alex Certify ನಿಜವಾಯ್ತು ನಾಸ್ಟ್ರಾಡಾಮಸ್​ ಭವಿಷ್ಯ: ಭೂಮಿಯ ಸಮೀಪ ಧಾವಿಸಿದ ಮತ್ತೊಂದು ಬೃಹತ್ ಕ್ಷುದ್ರ ಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾಯ್ತು ನಾಸ್ಟ್ರಾಡಾಮಸ್​ ಭವಿಷ್ಯ: ಭೂಮಿಯ ಸಮೀಪ ಧಾವಿಸಿದ ಮತ್ತೊಂದು ಬೃಹತ್ ಕ್ಷುದ್ರ ಗ್ರಹ

ಸೆಂಟ್ರಲ್​ ಫಾರ್​ ನಿಯರ್ ಅರ್ಥ್​ ಆಬ್ಜೆಕ್ಟ್ ಸ್ಟಡೀಸ್,​​ ಭೂಮಿಯ ಸಮೀಪ 5 ಕ್ಷುದ್ರಗ್ರಹಗಳು ಧಾವಿಸುತ್ತಿವೆ ಎಂಬ ಮಾಹಿತಿಯನ್ನ ನೀಡಿದೆ. ಇದರಲ್ಲಿ ಮೂರು ಕ್ಷುದ್ರಗ್ರಹಗಳು ತುಲನಾತ್ಮಕವಾಗಿ ಚಿಕ್ಕದಾಗಿವೆ, ಆದರೆ ಉಳಿದ 2 ಕ್ಷುದ್ರಗ್ರಹಗಳು ಐಫೆಲ್​ ಟವರ್​ಗಿಂತಲೂ ದೊಡ್ಡದಾಗಿವೆ.

ಈ ಮೂಲಕ ಫ್ರೆಂಚ್​ ಜ್ಯೋತಿಷಿ ನಾಸ್ಟ್ರಾಡಾಮಾಸ್​ ನೀಡಿದ ಮತ್ತೊಂದು ಮುನ್ಸೂಚನೆ ನಿಜವಾದಂತಾಗಿದೆ. ನಾಸ್ಟ್ರಾಡಾಮಸ್​ 465 ವರ್ಷಗಳ ಹಿಂದೆ ತನ್ನ ಲೆಸ್​ ಪ್ರೊಫೆಟಿಸ್​ ಪುಸ್ತಕದಲ್ಲಿ ಈ ಬಗ್ಗೆ ಭವಿಷ್ಯವನ್ನ ಬರೆದಿದ್ದರು.

2021 ಸಿಓ 247 ಹೆಸರಿನ ದೈತ್ಯಾಕಾರದ ಕ್ಷುದ್ರಗ್ರಹ ಫ್ರಾನ್ಸ್​ನ ಐಫೆಲ್​ ಟವರ್​ ಗಾತ್ರದ 0.83ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಬೃಹತ್​ ಕ್ಷುದ್ರಗ್ರಹವು ಭೂಮಿಯಿಂದ 7.4 ಮಿಲಿಯನ್​ ಕಿಲೋಮೀಟರ್​ ದೂರದಿಂದ ಹಾದುಹೋಗಲಿದೆ. ಜನವರಿ ಮೂರರಂದು 220 ಮೀಟರ್​ ಉದ್ದದ ಕ್ಷುದ್ರಗ್ರಹ ಭೂಮಿಯಿಂದ 6.9 ಮಿಲಿಯಲ್​ ಕಿಲೋಮೀಟರ್​ ದೂರದಿಂದ ಹಾದು ಹೋಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...