ನಮ್ಮ ದೇಶದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣಗಳಿಲ್ಲ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಘೋಷಿಸಿದ್ದಾನೆ.
ಶನಿವಾರ ಮಿಲಿಟರಿ ಪರೇಡ್‌ನಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಆತ, ಕೊರೊನಾ ವೈರಸ್ ನಮ್ಮ ದೇಶದಲ್ಲಿ ಇಲ್ಲ ಎಂಬುದನ್ನು ಹೇಳಿದ್ದಾನೆ.
ನೆರೆಯ ಚೀನಾದಿಂದ ಸೋಂಕು ವಿಶ್ವಕ್ಕೆ ವ್ಯಾಪಿಸಿರುವ ಸಂದರ್ಭದಲ್ಲಿ ನಮ್ಮ ರಾಷ್ಟ್ರದಲ್ಲಿ ಅದನ್ನು ಮಟ್ಟಹಾಕಿದ್ದು, ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಕೊರೊನಾ ಸೋಂಕು ವ್ಯಾಪಿಸುತ್ತಿದ್ದಂತೆ ಪ್ಯಾಂಗ್‌ಗ್ಯಾನ್ ಜನವರಿಯಲ್ಲಿ ತನ್ನ ಗಡಿಗಳನ್ನು ಮುಚ್ಚಿತು. ಕೊರೊನಾ ನಮ್ಮಲ್ಲಿ ಇಲ್ಲ ಎಂದು ಹೇಳಿಕೊಂಡು ಬರಲಾಗಿತ್ತು. ಆದರೆ ಸ್ಥಳೀಯ ಮಾಧ್ಯಮಗಳು ಇಂತಹ ಹೇಳಿಕೆಗಳಿಂದ ಇತ್ತೀಚೆಗೆ ದೂರ ಸರಿದಿವೆ. ಬದಲಿಗೆ ತಡೆಗಟ್ಟುವ ಪ್ರಯತ್ನಗಳು ಮಹತ್ವವನ್ನು ಪದೇಪದೇ ಹೇಳುತ್ತಿವೆಯಂತೆ.