
ಲಾರಾ ಚಂಡಮಾರುತವು ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಅಮೆರಿಕದ ಲೂಸಿಯಾನಾ ಪ್ರದೇಶವು ಅಕ್ಷರಶಃ ತತ್ತರಿಸಿದೆ. ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯ ಜೊತೆಗೆ ಪ್ರವಾಹದ ಪರಿಸ್ಥಿತಿಯೂ ನೆಲೆಸಿದೆ.
ಲೂಸಿಯಾನಾ ಹಾಗೂ ಟೆಕ್ಸಾಸ್ ಕರಾವಳಿಗೆ ಅಪ್ಪಳಿಸಿದ ಲಾರಾ, 5ನೇ ಹಂತದ ತೀವ್ರತೆಗೆ ಏರುವ ಸಾಧ್ಯತೆಗಳು ನೆಲೆಸಿವೆ. ಈ ಚಂಡಮಾರುತವು ಕಟ್ಟಡಗಳನ್ನೇ ಬೀಳಿಸಬಲ್ಲಷ್ಟು ಪ್ರಬಲವಾಗಿದ್ದು, ವಾಹನಗಳು ಹಾಗೂ ಮರಗಳನ್ನು ತೂರಿಸಿ ಬಿಸಾಡುತ್ತಿವೆ.
ಇದೇ ವೇಳೆ ಅಮೆರಿಕದ ರಾಷ್ಟ್ರೀಯ ಸಾಗರಿಕ ಹಾಗೂ ವಾತಾವರಣ ಆಡಳಿತ (NOAA) ಕೆಲವೊಂದು ಚಿತ್ರಗಳನ್ನು ಸೆರೆ ಹಿಡಿದಿದೆ. ಚಂಡಮಾರುತವನ್ನು ಬೆನ್ನತ್ತುವ ವಿಮಾನವು ಲಾರಾದ ಟೈಮ್-ಲ್ಯಾಪ್ಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.