ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ.
ಆದರೆ, ಇಲ್ಲೊಂದು ಮದುವೆಗೆ ಬಂದ ಅತಿಥಿಗಳು ತಮಗೆ ಉಣಬಡಿಸಿದ ಭೋಜನದ ಐಟಮ್ಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕತ್ತರಿಸಿದ ತರಕಾರಿ& ಹಣ್ಣುಗಳು, ಒಂದು ಬ್ಯಾಗ್ ಚಿಪ್ಸ್ ಹಾಗೂ ಅರ್ಧ ಸ್ಯಾಂಡ್ ವಿಚ್ ಮಾತ್ರವೇ ಇದ್ದ ಊಟದ ತಟ್ಟೆಯ ಫೋಟೋ ವೈರಲ್ ಆಗಿದೆ. “ಶಾಲೆಯ ಲಂಚ್ ಬಾಕ್ಸ್ನಲ್ಲಿ ಈ ಐಟಮ್ಗಳನ್ನು ನೋಡಿದ್ರೆ ಖುಷಿ ಪಡಬಹುದಿತ್ತು. ಆದರೆ ಮದುವೆ ಮನೆಯಲ್ಲಿ ಇದೆಂಥಾ ಊಟ?” ಎಂದು ಅತಿಥಿಗಳು ಒಳಗೊಳಗೇ ಹೌಹಾರಿಕೊಂಡಿದ್ದಾರೆ.
ಆದರೆ, ಭೂರೀ ಭೋಜನವನ್ನೂ ಮೀರಿ ಮದುವೆ ಅನ್ನುವುದು ಎರಡು ಜೀವಗಳ ಸಂಗಮ ಎನ್ನುವುದನ್ನು ಪ್ರಬುದ್ಧ ಮನಸ್ಸುಗಳು ಅರ್ಥ ಮಾಡಿಕೊಳ್ಳುತ್ತವೆ ಬಿಡಿ.