ವಾಷಿಂಗ್ಟನ್: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈಗ ಮೀಟಿಂಗ್, ಇಂಟರ್ವ್ಯೂ ಎಲ್ಲವೂ ಆನ್ ಲೈನ್ ವರ್ಚುವಲ್ ಮೀಟಿಂಗ್ ಮೂಲಕವೇ ನಡೆಯುತ್ತದೆ. ಜೂಮ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಜೂಮ್ ಆ್ಯಪ್ ಈಗ ಈಗ ಮೀಟಿಂಗ್ ಗಳಿಗೆ ಸಮಯ ಮಿತಿ ವಿಧಿಸಿದೆಯೆ…? ಅಂಥದೊಂದು ಚೆರ್ಚೆ ಈಗ ಅಮೆರಿಕಾದಲ್ಲಿ ನಡೆದಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಅವರನ್ನು ಎಂ.ಎಸ್.ಎನ್.ಬಿ.ಸಿ.ಚಾನಲ್ ನಲ್ಲಿ ರಿಚಲ್ ಮೆಡೊವ್ ಶೋಗಾಗಿ ಜೂಮ್ ಮೀಟಿಂಗ್ ನಲ್ಲಿ ಸಂದರ್ಶನ ನೀಡಿದ್ದರು.
ಅವರು ಮಾತನಾಡುವಾಗ “ನಿಮ್ಮ ಮೀಟಿಂಗ್ 10 ನಿಮಿಷದಲ್ಲಿ ಕೊನೆಗೊಳ್ಳಲಿದೆ. ಅನ್ ಲಿಮಿಟೆಡ್ ಜೂಮ್ ಮೀಟಿಂಗ್ ಗಾಗಿ ಆ್ಯಪ್ ಅಪ್ ಡೇಟ್ ಮಾಡಲು ಐಟಿ ವಿಭಾಗ ಸಂಪರ್ಕಿಸಿ” ಎಂದು ಕೆಳಗಡೆ ಪಾಪ್ – ಅಪ್ ಸಂದೇಶ ಬರುತ್ತಿತ್ತು. ಜನ ಅದರ ಸ್ಕ್ರೀನ್ ಶಾಟ್ ಹೊಡೆದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ವ್ಯಾಪಕ ಹಾಸ್ಯಮಯ ಚರ್ಚೆಗೆ ಕಾರಣವಾಗಿದೆ.
“ಅಧ್ಯಕ್ಷೀಯ ಚುನಾವಣೆಗೆ ಆಯ್ಕೆಯಾದವರಿಗೆ, ನಿವೃತ್ತ ಕಾರ್ಯದರ್ಶಿಯಾಗಿರುವರಿಗೂ ಜೂಮ್ ಸಮಯ ಮಿತಿ ಹಾಕಿದೆ” ಎಂದು ಒಬ್ಬ ಟ್ವಿಟ್ವರ್ ನಲ್ಲಿ ಕಮೆಂಟ್ ಮಾಡಿ, ಕಿಚಾಯಿಸಿದ್ದಾನೆ.
ಇನ್ನೊಬ್ಬ “ನಿಜ, ಜೂಮ್ ಮೀಟಿಂಗ್ ಗಳು 40 ನಿಮಿಷಕ್ಕಿಂತ ಹೆಚ್ಚಿರಬಾರದು. ಬಿ ಸ್ಮಾರ್ಟ್” ಎಂದು ಸಲಹೆ ನೀಡಿದ್ದಾನೆ. ಹಿಲರಿ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ತಾನು ಜೂಮ್ ಆ್ಯಪ್ ಅಪ್ ಡೇಟ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.