ಕೊರೊನಾ ಸಾಂಕ್ರಾಮಿಕ ಬಂದನಂತರ ವಿಶ್ವಾದ್ಯಂತ ವ್ಯಾಪಾರ ವಹಿವಾಟುಗಳಲ್ಲಿ ಅನೇಕ ಹೊಸತನಗಳು ಪರಿಚಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಗೆಬಗೆಯ ಟೆಕ್ನಿಕ್ ಅಳವಡಿಕೆಯಾಗುತ್ತಿದೆ.
ಥಾಯ್ಲೆಂಡಿನಲ್ಲಿ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೆ ಅಂಗಡಿಯ ಸ್ವಯಂಚಾಲಿತ ಬಾಗಿಲು ತೆರೆಯದಂತಹ ವಿನೂತನ ತಂತ್ರಜ್ಞಾನ ಬಳಸಲಾಗಿದೆ. ಜತೆಗೆ ಗ್ರಾಹಕರ ದೇಹದ ಉಷ್ಣಾಂಶವನ್ನು ಪತ್ತೆ ಮಾಡುವ ಆಟೊಮ್ಯಾಟಿಕ್ ಸಾಧನವನ್ನೂ ಅಲ್ಲಿ ಅಳವಡಿಸಲಾಗಿದೆ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಪ್ರಕಾರ ಥೈಲ್ಯಾಂಡ್ ಅಂಗಡಿಗಳು ಗ್ರಾಹಕರು ಫೇಸ್ ಮಾಸ್ಕ್ ಧರಿಸುವುದನ್ನು ಮತ್ತು ಫೇಸ್ ಕವರಿಂಗ್ ಅನ್ನು ಯಾವ ರೀತಿ ಖಾತ್ರಿಪಡಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ.
ಅಂಗಡಿಯ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾದ ಸ್ಕ್ರೀನ್ ಗ್ರಾಹಕರ ಮುಖಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ತಾಪಮಾನವನ್ನು ಸಹ ಪರಿಶೀಲಿಸುತ್ತದೆ.
ಗ್ರಾಹಕರು ಫೇಸ್ ಮಾಸ್ಕ್ ಧರಿಸಿದಾಗ ಮತ್ತು ಹೆಚ್ಚಿನ ತಾಪಮಾನ ಹೊಂದಿರದಿದ್ದರೆ ಮಾತ್ರ ಗೇಟ್ ತೆರೆದುಕೊಳ್ಳುತ್ತದೆ.
ಮಾಸ್ಕ್ ಧರಿಸದ ಕೆಲವರು ಗಲಾಟೆಗಿಳಿದ ಮತ್ತು ನಿಂದಿಸಿದ ಪ್ರಕರಣಗಳು ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ನಡೆದಿದೆ. ಇಂಥದ್ದನ್ನು ತಪ್ಪಿಸಲು
ಈ ವಿಶೇಷ ಸ್ಕ್ಯಾನರ್ಗಳು ಸುಲಭ ಪರಿಹಾರವಾಗಿ ಕಾಣಿಸಿದೆ.