
ಪೂರ್ವ ಹಾಗೂ ಪಶ್ಚಿಮ ಮೊನಾರ್ಕ್ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದ್ದು, ಎರಡೂ ತಳಿಗಳಲ್ಲಿ ಇರುವ ವಂಶವಾಹಿಗಳು ಒಂದೇ ಥರದ್ದಾಗಿವೆ ಎಂದು ತಿಳಿಸಿದ್ದಾರೆ.
ಅಮೆರಿಕ-ಕೆನಡಾ ಗಡಿಯಿಂದ ಕೇಂದ್ರ ಮೆಕ್ಸಿಕೋದತ್ತ ಸುಮಾರು 3,000 ಮೈಲಿ ದೂರ ಈ ಪೂರ್ವ ಮೊನಾರ್ಕ್‌ಗಳು ವಲಸೆ ಬಂದಿವೆ. ಮತ್ತೊಂದೆಡೆ ಪಶ್ಚಿಮ ಮೊನಾರ್ಕ್‌ಗಳು ಪೆಸಿಫಿಕ್ ತೀರದತ್ತ ಚಳಿಗಾಲದಲ್ಲಿ 300 ಮೈಲಿಗಳಷ್ಟು ದೂರ ಸಂಚರಿಸುತ್ತವೆ. ಎಮೊರಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಬಯಾಲಾಜಿಸ್ಟ್‌ಗಳು ಈ ಅಧ್ಯಯನ ನಡೆಸಿದ್ದು, ’Molecular Ecology’ಯಲ್ಲಿ ಪ್ರಕಟಿಸಿದ್ದಾರೆ.
”ಈ ಹಿಂದೆ ಅಂದುಕೊಂಡದ್ದಕ್ಕಿಂತಲೂ ಹೆಚ್ಚಾಗಿ ಈ ಪೂರ್ವ ಹಾಗೂ ಪಶ್ಚಿಮ ಮೊನಾರ್ಕ್‌ಗಳು ಸಂಧಿಸುತ್ತಾ ಬಂದಿದ್ದು, ದೊಟ್ಟ ಮಟ್ಟದಲ್ಲಿ ವಂಶವಾಹಿಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾ ಬಂದಿವೆ” ಎಂದು ಈ ಅಧ್ಯಯನ ವರದಿಯ ಲೇಖಕರಾದ ವೆಂಕಟ್ ತಲ್ಲಾ ತಿಳಿಸಿದ್ದಾರೆ.