alex Certify ಏಕಾಂಗಿಯಾಗಿ 25 ಟನ್ ಮರಳು ತೆರವುಗೊಳಿಸಿದ ಪರೋಪಕಾರಿಗೆ ಆಗಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಂಗಿಯಾಗಿ 25 ಟನ್ ಮರಳು ತೆರವುಗೊಳಿಸಿದ ಪರೋಪಕಾರಿಗೆ ಆಗಿದ್ದೇನು….?

ಬ್ರಿಟನ್‌ನ ಸಜ್ಜನರೊಬ್ಬರು ಏಕಾಂಗಿ ಶ್ರಮ ಹಾಕಿ ಬೈಸಿಕಲ್ ಪಥದಲ್ಲಿ ಸೇರಿಕೊಂಡಿದ್ದ 25 ಟನ್‌ನಷ್ಟು ಮರಳನ್ನು ತೆಗೆದು ಹಾಕುವ ಮೂಲಕ ಪರೋಪಕಾರ ಮೆರೆಯಲು ಮುಂದಾದರೆ ಸ್ಥಳೀಯ ಆಡಳಿತ ಅವರ ಈ ಶ್ರಮಕ್ಕೆ ಕಲ್ಲು ಹಾಕಿದೆ. ಮರಳನ್ನು ಮತ್ತೆ ಅದೇ ಜಾಗದಲ್ಲಿಹಾಕಲಾಗಿದೆ.

ಕ್ರಿಸ್ ಟುರೆಟ್ಟ್‌ ಹೆಸರಿನ 51 ವರ್ಷ ವಯಸ್ಸಿನ ಈ ವ್ಯಕ್ತಿ, ಮಹಿಳೆಯೊಬ್ಬರು ಸೈಕಲ್‌ ಪಥದಲ್ಲಿ ಬಿದ್ದು ಗಾಯ ಮಾಡಿಕೊಂಡ ಕಥೆ ಕೇಳಿದ ಕೂಡಲೇ ಅಲ್ಲಿದ್ದ ಮರಳನ್ನು ತೆಗೆದುಹಾಕಲು ಹಿಂದೆ ಮುಂದೆ ನೋಡದೇ ಮುಂದೆ ಬಂದಿದ್ದಾರೆ. ಕರಗಳ ಮೇಲೆ ಒಪ್ಪಳೆ ಬರಿಸಿಕೊಂಡು, 60 ಕಿಮೀ ಅಪ್‌ & ಡೌನ್ ನಡೆದಾಡಿ ಒಂದು ತಂಡ ಮಾಡುವಷ್ಟು ಕೆಲಸವನ್ನು ಒಬ್ಬರೇ ಮಾಡಿದ್ದಾರೆ ಕ್ರಿಸ್.

ಸೌತ್‌ಪೋರ್ಟ್‌ನ ಮರ್ಸೆಸೈಡ್‌ ಎಂಬ ಊರಿನ ಬೈಸಿಕಲ್ ಪಥವನ್ನು ಸ್ವಚ್ಛಗೊಳಿಸಿದ ಕ್ರಿಸ್‌, ಇದಕ್ಕಾಗಿ ಎರಡು ತಿಂಗಳ ಪರಿಶ್ರಮ ಪಟ್ಟಿದ್ದರು.

ಈ ಕಾರಣದಿಂದಾಗಿ ಜಪಾನ್​ನ ಹೋಟೆಲ್​ಗಳಲ್ಲಿ ಊಟದ ಜೊತೆ ನೀಡಲ್ಲ ಪಾನೀಯ….!

“ಅದು ನನ್ನ ತಾಯಿಯೇ ಆಗಿದ್ದರೆ ಹೇಗಿರುತ್ತಿತ್ತು ಎಂದು ನನಗೆ ಸದಾ ಅನಿಸುತ್ತಿತ್ತು. ಹಾಗಾಗಿ ಈ ಪರಿಸ್ಥಿತಿಯನ್ನು ಸರಿಪಡಿಸಲು ನಾನೇ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆ. ಅಲ್ಲಿಗೆ ಎರಡು ವಾರಗಳ ಮಟ್ಟಿಗೆ ಪ್ರತಿನಿತ್ಯ ಹೋಗಿ ಕೆಲಸ ಮಾಡುತ್ತಿದ್ದೆ. ನಾನು ಮತ್ತೆ ಕೆಲಸಕ್ಕೆ ಹೋದ ಬಳಿಕ ವಾರಾಂತ್ಯಗಳಲ್ಲಿ ಹೀಗೆ ಶ್ರಮದಾನ ಮಾಡುತ್ತಿದ್ದೆ. ಅದು ಕಠಿಣ ಪರಿಶ್ರಮ. ಬಹಳ ನೋವು ಕೊಡುವ ಒಪ್ಪಳೆಗಳೆಲ್ಲಾ ನನಗೆ ಆಗಿವೆ. ಆದರೆ ಪಥವನ್ನು ಸುರಕ್ಷಿತವಾಗಿಡಲು ಯತ್ನಿಸಿದೆ ಎಂದು ತಿಳಿದಾಗ ಇವೆಲ್ಲಾ ಸಾರ್ಥಕವಾಗುತ್ತದೆ” ಎನ್ನುತ್ತಾರೆ ಕ್ರಿಸ್.

“ಈ ಹಿಂದೆ ಪೌರ ಕಾರ್ಮಿಕರು ಇವನ್ನೆಲ್ಲಾ ಮಾಡುತ್ತಿದ್ದದ್ದನ್ನು ಕಂಡಿದ್ದೇನೆ. ಇದು ಅವರಿಗೆ ಬಹಳ ಸುಲಭವಾದ ಕೆಲಸ, ಆದರೆ ಅವರು ಬಹಳ ಸೋಮಾರಿಗಳು. ಫುಟ್‌ಪಾತ್‌ ಮೇಲೆ ಇರುವುದಕ್ಕಿಂತ ಬೈಸಿಕಲ್ ಪಥದ ಮೇಲೆ ಮರಳು ಬಹಳ ಅಪಾಯಕಾರಿ, ಜನರು ತಮ್ಮ ಬೈಕ್‌ಗಳ ಮೇಲಿಂದ ಜಾರಿ ಬೀಳಬಹುದು” ಎಂದು ಕ್ರಿಸ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...