ಕೊರೊನಾ ವೈರಸ್ ವಿರುದ್ಧ ರಷ್ಯಾ ಸಿದ್ಧಪಡಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆ ಪಡೆದ ಬಳಿಕ 2 ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕು ಅಂದರೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳ ಅಗತ್ಯವಿದೆ ಎಂದು ರಷ್ಯಾ ಉಪ ಪ್ರಧಾನಿ ಟಟಿಯಾನಾ ಗೋಲಿಕೋವಾ ಹೇಳಿದ್ದಾರೆ.
ಲಸಿಕೆ ಪಡೆದ ರಷ್ಯನ್ನರು ಜನಸಂದಣಿ ಸ್ಥಳಗಳಲ್ಲಿ ಹೋಗಿ ನಿಲ್ಲುವುದು, ಮಾಸ್ಕ್ ಧರಿಸದಿರೋದು, ಸ್ಯಾನಿಟೈಸರ್ ಬಳಕೆ ಮಾಡದಿರೋದು, ಆಲ್ಕೋಹಾಲ್ ಬಳಕೆ ಇವೆಲ್ಲವನ್ನ ಬಂದ್ ಮಾಡಬೇಕಾಗುತ್ತದೆ ಎಂದು ಗೋಲಿಕೋವಾ ಸಂದರ್ಶನದಲ್ಲಿ ಹೇಳಿದ್ದಾರೆ.