ಕೇವಲ 2 ಇಂಚು ಉದ್ದ ಹಾಗೂ 10 ಗ್ರಾಂ ತೂಕವಿರುವ ಅವಳಿ ಕೋತಿಗಳು ಬ್ರಿಟನ್ನ ಚೆಸ್ಟರ್ ಮೃಗಾಲಯದಲ್ಲಿ ಜನಿಸಿವೆ.
ವಿಚಿತ್ರ ಅಂದರೆ ಈ ಕೋತಿಗಳು ಸಣ್ಣ ಚೆಂಡಿಗಿಂತಲೂ ಕಡಿಮೆ ಗಾತ್ರ ಹೊಂದಿವೆಯಂತೆ.
ಈ ಸಣ್ಣ ಸಸ್ತನಿಗಳನ್ನ ಪಿಗ್ಮಿ ಮಾರ್ಮೋಸೆಟ್ ಎಂದು ಗುರುತಿಸಲಾಗಿದೆ. ಇದು ವಿಶ್ವದ ಅತ್ಯಂತ ಪುಟಾಣಿ ಕೋತಿಗಳ ಪ್ರಭೇದದಲ್ಲಿ ಒಂದಾಗಿದೆ.
ಮೂರು ಹಾಗೂ ನಾಲ್ಕು ವರ್ಷ ವಯಸ್ಸಿನವಾದ ಜೊಯಿ ಹಾಗೂ ಬಾಲ್ಡ್ರಿಕ್ ಎಂಬ ಹೆಸರಿನ ಕೋತಿಗಳಿಗೆ ಈ ಎರಡು ಮರಿಗಳು ಜನಿಸಿವೆ.
https://www.facebook.com/chesterzoo1/videos/737995553738482/?t=9