ಸುಮಾರು 350 ಮಿಲಿಯನ್ ಪೌಂಡ್ ಮೊತ್ತ ಸೈಬರ್ ವಂಚನೆಯ ಆರೋಪದಲ್ಲಿ ಹುಷ್‌ಪುಪ್ಪಿ ಎನ್ನುವ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ನೈಜೀರಿಯಾ ಮೂಲದ ರೇಮೆಂಡ್ ಅಬ್ಬಾಸ್ ಆಲಿಯಾಸ್ ಹುಷ್‌ಪುಪ್ಪಿ ಎನ್ನುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವ ಹೊಂದಿದ್ದ ಸೆಲೆಬ್ರಿಟಿಯಾಗೊದ್ದ. ತಾನೊಬ್ಬ ಕೋಟ್ಯಧಿಪತಿ ಎನ್ನುವ ರೀತಿ ಫೋಸ್ ಕೊಡುತ್ತಿದ್ದ ಆತ ಈ ಮೂಲಕ ವಂಚನೆ ಮಾಡುತ್ತಿದ್ದ. ಆದ್ದರಿಂದ ದುಬೈನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಎಫ್‌ಬಿಐ ಹಾಗೂ ಇಂಟರ್‌ಪೋಲ್ ಅಧಿಕಾರಿಗಳ ನೆರವಿನೊಂದಿಗೆ ಆತನನ್ನು ಬಂಧಿಸಲಾಗಿದೆ.
ಬಂಧನದ ವೇಳೆ ಸುಮಾರು 30 ಮಿಲಿಯನ್ ಪೌಂಡ್ ಹಣವನ್ನು ಜಪ್ತಿ ಮಾಡಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಸುಮಾರು 2.4 ಮಿಲಿಯನ್ ಫಾಲೋವರ್ಸ್ ಹೊಂದಿರುವ 38 ವರ್ಷದ ಈತನ ವಿರುದ್ಧ ಸುಮಾರು ಎರಡು ಮಿಲಿಯನ್ ದೂರುಗಳು ಬಂದಿವೆಯಂತೆ. ಈತನೊಂದಿಗೆ 12 ಜನರನ್ನು ಹಾಗೂ ಕಂಪ್ಯೂಟರ್ ಹಾಗೂ ಫೋನ್‌ಗಳನ್ನು ಜಫ್ತಿ ಮಾಡಲಾಗಿದೆ.