ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ.
ಭಾರತವು ಕೋವಿಡ್ 19ನಿಂದಾಗಿ ಸಾಕಷ್ಟು ಜೀವಗಳನ್ನ ಕಳೆದುಕೊಳ್ಳುತ್ತಿದೆ. ಭಾರತದ ಜೊತೆಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ನಯಾಗರ ಜಲಪಾತವು ಇಂದು ರಾತ್ರಿ 9.30 ರಿಂದ 10 ಗಂಟೆಯವರೆಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ದೀಪಗಳಿಂದ ಮಿನುಗಲಿದೆ ಎಂದು ಬುಧವಾರ ನಯಾಗರ ಪಾರ್ಕ್ಸ್ ಟ್ವೀಟ್ ಮಾಡಿದೆ.
ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಕಂಗೊಳಿಸಿದೆ. ಈ ಹಿಂದೆ ದೇಶದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಮಿನುಗಿತ್ತು. ಇದೀಗ ಕೊರೊನಾ ಸಂಕಷ್ಟದಲ್ಲಿರುವ ಭಾರತಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಯಾಗರ ಮತ್ತೊಮ್ಮೆ ತ್ರಿವರ್ಣ ಧ್ವಜದಲ್ಲಿ ಕಂಗೊಳಿಸಿದೆ.
ಕೆನಡಾದ ಈ ಕಾರ್ಯಕ್ಕೆ ಭಾರತೀಯರು ಟ್ವಿಟರ್ನಲ್ಲಿ ಧನ್ಯವಾದ ಅರ್ಪಿಸುತ್ತಿದ್ದಾರೆ.
https://twitter.com/IconicSidharth/status/1387489910848987142