ಕ್ಯಾಲಿಫೋರ್ನಿಯಾದ ಸೆನೆಟರ್ ಕಮಲಾ ಹ್ಯಾರಿಸ್ ಈಗ ಅತಿ ಪ್ರಚಲಿತದಲ್ಲಿರುವ ಮಹಿಳೆ.
ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯೆಂದು ಘೋಷಿತವಾದ ಮೇಲೆ ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಉಮೇದುವಾರಿಕೆಯನ್ನು ಖುಷಿಪಟ್ಟವರು ಮತ್ತು ಅಸಮ್ಮತಿ ಸೂಚಿಸಿದವರೂ ಇದ್ದಾರೆ.
ಆಕೆಯ ಹೆಸರು ನಾಮನಿರ್ದೇಶನವಾಗುತ್ತಿದ್ದಂತೆ ಅಧ್ಯಕ್ಷ ಟ್ರಂಪ್ ಅನೇಕ ತಿರಸ್ಕಾರದ ಮಾತುಗಳನ್ನು ಹೇಳಿದರು. ಇಷ್ಟರ ನಡುವೆಯೂ ಆಕೆಯ ಹೆಸರನ್ನು ತಿರುಚಿದ ರೂಪದಲ್ಲಿ ಮಾಧ್ಯಮಗಳಲ್ಲಿ ಬರಲಾರಂಭಿಸಿದೆ.
ಸುದ್ದಿವಾಹಿನಿಯೊಂದರಲ್ಲಿ ನ್ಯೂಸ್ ಆ್ಯಂಕರ್ ಆಕೆಯ ಹೆಸರನ್ನು ತಪ್ಪಾಗಿ ಉಚ್ಚಾರಿಸುವ ಮತ್ತು ಅದನ್ನು ಡೆಮೋಕ್ರೆಟಿಕ್ ಪ್ರತಿನಿಧಿ ಮೊಟಕಿ ಸರಿಪಡಿಸುವ ಪ್ರಮೇಯ ನಡೆದಿದ್ದು, ಟಿವಿ ಆ್ಯಂಕರ್ ಮತ್ತು ಚರ್ಚೆಯಲ್ಲಿ ಪಾಲ್ಗೊಂಡವರ ಈ ಚರ್ಚೆ ವಿಡಿಯೋ ತುಣುಕು ವೈರಲ್ ಆಗಿದೆ. ಉದ್ದೇಶಪೂರ್ವಕವಾಗಿ ಹೆಸರನ್ನು ತಪ್ಪಾಗಿ ಉಚ್ಛರಿಸುವುದನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ.