ನ್ಯೂಜಿಲೆಂಡ್ ಪೊಲೀಸ್ ಇಲಾಖೆ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್ ಸಮವಸ್ತ್ರ ನೀಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಇಲಾಖೆಗೆ ಸೇರುವಂತೆ ಪ್ರೇರೇಪಿಸಲಾಗಿದೆ.
ಕಾನ್ಸ್ಟೇಬಲ್ ಝೀನಾ ಅಲಿ ನ್ಯೂಜಿಲೆಂಡ್ ಪೊಲೀಸ್ ಇಲಾಖೆಯ ಲ್ಲಿ ಹಿಜಾಬ್ ತೊಡುವ ಮೊದಲ ಮಹಿಳೆಯಾಗಲಿದ್ದಾರೆ. ನ್ಯೂಜಿಲೆಂಡ್ನಲ್ಲಿ ಕಳೆದ ವರ್ಷ ಉಗ್ರರು ದಾಳಿ ನಡೆಸಿದ್ದ ವೇಳೆ ಎರಡು ಮಸೀದಿಗಳಲ್ಲಿನ 51 ಮಂದಿ ಸಾವಿಗೀಡಾಗಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಝೀನಾ ಪೊಲೀಸ್ ಇಲಾಖೆ ಸೇರುವ ಮೂಲಕ ಉಗ್ರರ ವಿರುದ್ಧ ಸಮರ ಸಾರಲು ನಿರ್ಧರಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನನ್ನ ಧರ್ಮವನ್ನ ಪ್ರತಿನಿಧಿಸುತ್ತಾ ಇರೋದಕ್ಕೆ ಬಹಳ ಹೆಮ್ಮೆಯಾಗ್ತಿದೆ ಅಂತಾ ಝೀನಾ ಸಂತಸ ವ್ಯಕ್ತಪಡಿಸಿದ್ದಾರೆ.