ನ್ಯೂಜಿಲೆಂಡ್ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
ಇತ್ತೀಚೆಗಷ್ಟೇ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಟಗರು ಕಾರಿನ ಮೇಲೆ ತೋರಿಸುವ ಪ್ರತಾಪ ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿಸಿದೆ. ಆಶ್ಬರ್ಟನ್ ಜಮೀನಿನಲ್ಲಿ ವಾಸವಾಗಿರುವ ರಾಂಬೋ ಹೆಸರಿನ ಟಗರು ತನ್ನ ಎದುರಿದ್ದ ಕಾರನ್ನ ಕಂಡು ಕಿರಿ ಕಿರಿ ಅನುಭವಿಸಿದೆ. ಕಾರಿಗೆ ತನ್ನ ತಲೆಯಿಂದ ಗುದ್ದುವ ಮೂಲಕ ಕಾರಿನ ಚಾಲಕ ಕಾರನ್ನ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದೆ. ಇನ್ನು ರಾಂಬೋ ವಿಚಾರವಾಗಿ ಮಾತನಾಡಿದ ಮಾಲೀಕ, 2 ವರ್ಷದ ರಾಂಬೋಗೆ ತಾನೊಬ್ಬ ಟಗರು ಜಾತಿಗೆ ಸೇರಿದ ಪ್ರಾಣಿ ಎಂಬುದು ಅರಿವಿಗೆ ಇಲ್ಲ ಎನಿಸುತ್ತದೆ. ಡೈರಿ ಫಾರಂನಲ್ಲಿ ಹಸುಗಳ ಜೊತೆ ವಾಸಿಸುವ ರಾಂಬೋ ತನ್ನನ್ನ ತಾನು ಡೈರಿ ಫಾರಂನ ಬಾಸ್ ಎಂದುಕೊಂಡಿದ್ದಾನೆ ಅಂತಾ ಹೇಳಿದ್ರು.