
ಕೋವಿಡ್-19 ಸೋಂಕಿನಿಂದ ಪಾರಾಗಬೇಕೆಂದರೆ ಮನೆಗಳಲ್ಲೇ ಇದ್ದುಕೊಂಡು ಕೆಲಸ ಮಾಡಲು ಜನರು ಮುಂದಾಗಿದ್ದಾರೆ. ಸಾಧ್ಯವಾದಷ್ಟೂ ಮನೆಗಳಲ್ಲೇ ಇರುವುದು ಸೂಕ್ತ ಎಂದು ಸರ್ಕಾರಗಳು ಆಗಾಗ ಹೇಳುತ್ತಲೇ ಬಂದಿವೆ.
ಬಸ್ಸೊಂದರ ಹವಾ ನಿಯಂತ್ರಣ ವ್ಯವಸ್ಥೆ ಮೂಲಕ ಚೀನಾದಲ್ಲಿ ಸೋಂಕುಪೀಡಿತ ವ್ಯಕ್ತಿಯೊಬ್ಬನಿಂದ ಸಾಮುದಾಯಿಕ ಮಟ್ಟದಲ್ಲಿ ಕೋವಿಡ್-19 ಹಬ್ಬಿರುವ ವಿಚಾರವನ್ನು ಮುಂದಿಟ್ಟುಕೊಂಡು ಸಂಶೋಧಕರು ಬೆಚ್ಚಿ ಬೀಳಿಸುವ ಸತ್ಯವೊಂದನ್ನು ಹೊರಹಾಕಿದ್ದಾರೆ.
“ದೂರಗಾಮಿ ಮಟ್ಟದಲ್ಲೂ ಸಹ ಗಾಳಿಯ ಮಾಧ್ಯಮದ ಮುಖಾಂತರ ಸೋಂಕು ಹಬ್ಬುವ ಸಾಧ್ಯತೆಗಳನ್ನು ನಮ್ಮ ಸಂಶೋಧನೆ ತೋರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕೈತೊಳೆದುಕೊಳ್ಳುವ ಕ್ರಮಗಳಿಂದ ಸೋಂಕು ಹಬ್ಬುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಬದಲಾಗಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ” ಎಂದು ಅಮೆರಿಕ ಜಾರ್ಜಿಯಾ ವಿವಿಯ ಯೆ ಶೆನ್ ತಿಳಿಸಿದ್ದಾರೆ.
National Academy of Sciences ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ವರದಿಯೊಂದರಲ್ಲಿ, ಲೋಕಾರೂಢಿಯಾಗಿ ಮಾತನಾಡುವ ವೇಳೆ ’ಜೆಟ್’ ನಂತೆ ಮಾತುಗಾರನ ಬಾಯಿಂದ ಚಿಮ್ಮುವ ಎಂಜಲಿನ ಕಣಗಳು ಬಹಳ ತ್ವರಿತವಾಗಿ ತಮ್ಮೊಡನೆ ಹಲವು ಮೀಟರ್‌ಗಳವರೆಗೂ ಸೋಂಕನ್ನು ಹೊತ್ತೊಯ್ಯುತ್ತವೆ.