ಕೊರೊನಾ ಮಹಾಮಾರಿ ವಿಶ್ವದ ಜನತೆಗೆ ಕೊಟ್ಟಿರೋ ಕಷ್ಟ ಒಂದೆರಡಲ್ಲ. ಜೀವಕ್ಕೆ ಹೆದರಿ ಮನೆಯಲ್ಲೇ ಇರುವ ಅನಿವಾರ್ಯತೆಯನ್ನ ಕೋವಿಡ್ ತಂದೊಡ್ಡಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಜೀವ ಕೈಲಿಡಿದೇ ಬದುಕುವ ಸ್ಥಿತಿ ಇದೆ.
ಕೊರೊನಾಗೆ ವೃದ್ಧರ ಮೇಲೆ ಅಧಿಕ ಪರಿಣಾಮ ಬೀರುವ ಅಂಶ ಎಲ್ಲರಿಗೂ ತಿಳಿದೇ ಇದೆ. ಆದರೆ ಮಕ್ಕಳ ಮೇಲೆ ಕೊರೊನಾ ಪರಿಣಾಮ ಕಡಿಮೆ ಎಂಬ ಅಂಶ ಅಧ್ಯಯನವೊಂದರಿಂದ ಬಯಲಾಗಿದೆ.
ಅಮೆರಿಕದಲ್ಲಿ ಕೋವಿಡ್ ನಿಯಮಗಳನ್ನ ಸಡಿಲಗೊಳಿಸಲಾಗಿದ್ದು ಶಾಲೆಗಳು ಹಾಗೂ ಇತರೆ ಸಂಸ್ಥೆಗಳನ್ನ ತೆರೆಯಲಾಗ್ತಿದೆ. ಆದರೆ ಶಾಲೆಗೆ ಹೋದರೆ ಮಕ್ಕಳಿಗೆ ಏನಾದ್ರೂ ಕೊರೊನಾ ಬಂದು ಬಿಟ್ಟರೆ ಎಂಬ ಆತಂಕ ಪೋಷಕರದ್ದು. ಪೋಷಕರ ಈ ಎಲ್ಲ ಆತಂಕಗಳಿಗೆ ಈ ಅಧ್ಯಯನ ಉತ್ತರ ನೀಡಿದೆ.
6 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕರೊನಾ ಬೀರುವ ಪರಿಣಾಮ ಕೊಂಚ ಕಡಿಮೆ. ಪೀಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಇಂತಹದ್ದೊಂದು ವರದಿ ಪ್ರಕಟವಾಗಿದೆ. ಇದರರ್ಥ ಮಕ್ಕಳಿಗೆ ಕೊರೊನಾ ಬರೋದೇ ಇಲ್ಲ ಎಂದಲ್ಲ. ಮಕ್ಕಳಿಗೂ ಕೊರೊನಾ ಹರಡುವ ಸಾಧ್ಯತೆ ಇದೆ. ಆದರೆ ಕೊರೊನಾದಿಂದ ವೃದ್ಧರಲ್ಲಿ ಯಾವ ರೀತಿ ಪರಿಣಾಮ ಉಂಟಾಗುತ್ತೋ ಅಷ್ಟರ ಮಟ್ಟಿನ ಪರಿಣಾಮ ಇರಲ್ಲ ಅಂತಾ ಹೇಳಲಾಗ್ತಿದೆ.