ಕೊರೋನಾಗೆ ನಾವು 6 ತಿಂಗಳಿನಲ್ಲಿ ವ್ಯಾಕ್ಸಿನ್ ಅನ್ನು ಜಗತ್ತಿನಾದ್ಯಂತ ವಿತರಿಸಿದರೂ ಸಹ ಇನ್ನೂ 10 ವರ್ಷಕ್ಕಿಂತ ಹೆಚ್ಚು ಕಾಲ ಈ ಕೋವಿಡ್ -19 ಪಿಡುಗು ಇರುತ್ತದೆ ಎಂದು ಬಯೋನ್ ಟೆಕ್ ಸಿಇಒ ಉಗರ್ ಸಾಹಿನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಫಾರ್ಮಾಸಿಟಿಕಲ್ ದೈತ್ಯ ಕಂಪನಿಯಾದ ಫೈಜರ್ ಸಂಸ್ಥೆಯು ಹಾಲಿ ಕೋವಿಡ್ ಲಸಿಕೆಗೆ ಸಂಬಂಧಿಸಿ ಬಯೋನ್ ಟೆಕ್ ವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಅಮೆರಿಕ, ಬ್ರಿಟನ್ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳಿಗೆ ಈ ಸಂಸ್ಥೆ ಮೂಲಕ ವ್ಯಾಕ್ಸಿನ್ ಪೂರೈಕೆಯಾಗಲಿದೆ. ಈಗ ಈ ಬಗ್ಗೆ ಸಂಸ್ಥೆಯ ಸಿಇಓ ಮಾತನಾಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಬರಲಿದೆ ಎಂಬುದು ಸದ್ಯದ ಮಟ್ಟಿಗೆ ಕಷ್ಟವಾಗುತ್ತದೆ. ಅಂದರೆ ಸಹಜ ಸ್ಥಿತಿ ಎಂಬುದಕ್ಕೆ ಸದ್ಯಕ್ಕೆ ಹೊಸ ವ್ಯಾಖ್ಯಾನ ಕೊಡಬೇಕಿದ್ದು, ನಮ್ಮ ನಡುವೆ ವ್ಯಾಕ್ಸಿನ್ ಇದ್ದರೂ ಸಹ ಈ ಮಹಾಮಾರಿ ಬರೋಬ್ಬರಿ 10 ವರ್ಷಕ್ಕಿಂತ ಹೆಚ್ಚು ಇರಲಿದೆ ಎಂದು ಹೇಳಿದ್ದಾರೆ.