ಬ್ಯಾಂಕಾಕ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿವೆ. ಭಾರೀ ಪ್ರತಿಭಟನೆಗಳ ನಡುವೆ ಎದ್ದು ಕಾಣುತ್ತಿರುವ ಥಾಯ್ ಸ್ಟ್ರೀಟ್ ಫುಡ್ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಎಂದಿನಂತೆ ನಡೆಸಿಕೊಂಡು ಹೋಗುತ್ತಿದ್ದು, ಪ್ರತಿಭಟನಾಕಾರರಿಗೆ ಖಾದ್ಯಗಳನ್ನು ಉಣಬಡಿಸುತ್ತಿದ್ದಾರೆ.
ಪ್ರತಿಭಟನೆಯನ್ನು ಥಾಯ್ ಸರ್ಕಾರ ಹತ್ತಿಕ್ಕುವ ಸಾಧ್ಯತೆಗಳು ಇದ್ದ ಕಾರಣ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯ ಸ್ಥಳಗಳ ಮಾಹಿತಿಯನ್ನು ರಹಸ್ಯವಾಗಿ ಇಟ್ಟಿದ್ದರು. ಪ್ರತಿಭಟನಾಕಾರರ ಈ ಪ್ಲಾನ್ ಕಾನೂನು ಪಾಲನಾ ಪಡೆಗಳನ್ನು ಫೂಲ್ ಮಾಡಿದರೂ ಸಹ, ಈ ರಹಸ್ಯದ ಬಗ್ಗೆ ಬೀದಿ ಬದಿಯ ಆಹಾರ ವ್ಯಾಪಾರಿಗಳಿಗೆ ಈ ಬಗ್ಗೆ ಚೆನ್ನಾಗಿ ತಿಳಿದಿತ್ತು.
ಪೂರ್ವ ನಿಗದಿತ ಸ್ಥಳಗಳಿಗೆ ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಈ ವ್ಯಾಪಾರಿಗಳು ಅಲ್ಲಿಗೆಲ್ಲಾ ಹೋಗಿ ತಂತಮ್ಮ ಸ್ಟಾಲ್‌ಗಳನ್ನು ಸ್ಥಾಪಿಸಿಕೊಂಡು ಬಿಡುತ್ತಿದ್ದರು. ಇದೇ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇವರನ್ನು CIA ಸಿಬ್ಬಂದಿಗೆ ಹೋಲಿಕೆ ಮಾಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ನಡುವೆ ವ್ಯವಸ್ಥಿತವಾದ ಹೊಂದಾಣಿಕೆಯ ಕಾರಣ ಇವೆಲ್ಲಾ ಸಾಧ್ಯವಾಗಿದೆ.