ಗೂಬೆ ಮರಿಯೊಂದು ತಲೆಯನ್ನು ನೆಲಕ್ಕೆ ತಾಗಿಸಿ ಮಲಗಿದ ವಿಡಿಯೋ ಈಗ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪತ್ರಕರ್ತ ಮಾರ್ಕ್ ರೀಸ್ ಎಂಬುವವರು ಮರಿ ಗೂಬೆಯೊಂದು ತಲೆಯನ್ನು ಕೆಳಗಿಟ್ಟು ಮಲಗಿದ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಅದೇಕೆ ಹಾಗೆ ಮಲಗಿದೆ ಎಂಬ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಅವು ಹುಟ್ಟುವಾಗ ಭಾರವಾದ ದೊಡ್ಡ ತಲೆ ಹೊಂದಿರುತ್ತವೆ. ಇದರಿಂದ ದೇಹದ ಮೇಲೆ ತಲೆ ನಿಯಂತ್ರಿಸಲು ಕಷ್ಟಪಡುತ್ತವೆ. ಮಲಗುವಾಗಲಂತೂ ತಲೆ ಅಡ್ಡ ಇಟ್ಟುಬಿಡುತ್ತವೆ. ಕೆಲ ತಿಂಗಳ ನಂತರ ಅವು ತಲೆಯನ್ನು ಎತ್ತಿ ಮಲಗುವುದನ್ನು ಕಲಿಯುತ್ತವೆ ಎಂದು ವಿವರಿಸಿದ್ದಾರೆ.
ಮಿಕಾ ಮಿಕಿನಾನ್ ಎಂಬ ಮಹಿಳೆ ಮಾರ್ಕ್ ರೀಸ್ ಅವರ ಮಾಹಿತಿಯನ್ನು ಸಾಕ್ಷೀಕರಿಸಲು ಮರದ ಮೇಲೆ ಗೂಬೆ ಮರಿ ತಲೆ ಕೆಳಗಿಟ್ಟು ಮಲಗಿದ ಇನ್ನೊಂದು ಪೋಟೋ ಶೇರ್ ಮಾಡಿದ್ದಾರೆ. ಇದರೊಟ್ಟಿಗೆ ಇನ್ನೂ ಕುತೂಹಲಕಾರಿ ಚರ್ಚೆಗಳು ನಡೆದಿವೆ.
ಗೂಬೆಗಳು ಮರದ ಮೇಲಿಂದ ಬೀಳದಂತೆ ಹೇಗೆ ನಿದ್ರಿಸುತ್ತವೆ..? ಎಂಬ ವಿಚಾರ ಚರ್ಚೆಗೆ ಬಂದಿವೆ. ಅವು ತಮ್ಮ ಹೆಬ್ಬೆರಳನ್ನು ಮರದ ಟೊಂಗೆಗೆ ಅಂಟಿಸಿಕೊಳ್ಳುತ್ತವೆ. ಕಾಲನ್ನು ಬಗ್ಗಿಸಿದರೆ ಮಾತ್ರ ಹೆಬ್ಬೆರಳಿನ ಹಿಡಿತ ಸಡಿಲವಾಗುತ್ತದೆ ಎಂದು ಇನ್ನೊಬ್ಬರು ವಿವರಿಸಿದ್ದಾರೆ.
https://twitter.com/reviewwales/status/1274645239509254146?ref_src=twsrc%5Etfw%7Ctwcamp%5Etweetembed%7Ctwterm%5E1274645239509254146%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fnetizens-surprised-to-learn-baby-owls-sleep-face-down-as-their-heads-are-too-heavy%2F610436