ನೇಪಾಳದ 43 ವರ್ಷದ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಮೌಂಟ್ ಎವರೆಸ್ಟ್ ಶಿಖರವನ್ನ ಒಂದೇ ತಿಂಗಳಲ್ಲಿ ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ ದಾಖಲೆಯನ್ನ ನಿರ್ಮಿಸಿದ್ದಾರೆ.
ನೇಪಾಳದ ಸಂಖುವಸಬಾ ಜಿಲ್ಲೆಯ ನಿವಾಸಿಯಾಗಿರುವ ತೆಂಜಿ ಮೇ 7ರಂದು ಎವರೆಸ್ಟ್ ಶಿಖರವನ್ನ ಏರಿದರು. ಇದಾದ ಬಳಿಕ ಮೇ 11ರಂದು ಮತ್ತೊಂದು ಬಾರಿ ಎವರೆಸ್ಟ್ ಶಿಖರವನ್ನ ಏರಿದ್ದಾರೆ. ಈ ಮೂಲಕ ಕೇವಲ ನಾಲ್ಕು ದಿನಗಳ ಅಂತರದಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನ ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಹಿಂದೆ ಭಾರತದ ಪರ್ವತಾರೋಹಿ ಅಂಶು ಜಮ್ಸೆನ್ಪಾ ಎಂಬವರು 2017ರಲ್ಲಿ 118 ಗಂಟೆ 15 ನಿಮಿಷ ಅವಧಿಯಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗಲೂ ಸಹ ಅಂಶು ಅತ್ಯಂತ ಕಡಿಮೆ ಅವಧಿಯಲ್ಲಿ 2 ಬಾರಿ ಎವರೆಸ್ಟ್ ಶಿಖರ ಏರಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಯನ್ನ ಹೊಂದಿದ್ದಾರೆ .