ಫ್ರಾನ್ಸ್ನಲ್ಲಿ 96 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಲ್ಲಿ ಕಾಂಡೋಮ್ ವಿತರಣಾ ಯಂತ್ರಗಳನ್ನ ಇರಿಸಲಾಗಿದೆ. ಲೈಂಗಿಕ ಶಿಕ್ಷಣ ಹಾಗೂ ಹೆಚ್ಐವಿ ವಿರುದ್ಧದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗಿದ್ದು, 96 ಪ್ರತಿಶತಕ್ಕಿಂತಲೂ ಹೆಚ್ಚಿನ ಶಾಲೆಗಳು ಕಾಂಡೋಮ್ ಯಂತ್ರಗಳನ್ನ ಸ್ಥಾಪಿಸಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಫ್ರಾನ್ಸ್ ಶಾಲೆಯೊಂದರ ಮುಖ್ಯೋಪಾಧ್ಯಾಯ, ಅಸುರಕ್ಷಿತ ಗರ್ಭದಾರಣೆ ಹಾಗೂ ಹೆಚ್ಐವಿ ಸೋಂಕಿನಿಂದ ವಿದ್ಯಾರ್ಥಿಗಳನ್ನ ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ.
ಯುರೋಪಿಯನ್ ರಾಷ್ಟ್ರದಲ್ಲಿ ಏಡ್ಸ್ ರೋಗಕ್ಕೆ ತುತ್ತಾದವರ ಸಂಖ್ಯೆ ಅತಿಯಾಗಿದ್ದರ ಹಿನ್ನೆಲೆ 1992 ನವೆಂಬರ್ ತಿಂಗಳಲ್ಲೇ ಮೊಟ್ಟ ಮೊದಲ ಬಾರಿಗೆ ಫ್ರಾನ್ಸ್ನ ಪ್ರೌಢಶಾಲೆಯೊಂದರಲ್ಲಿ ಕಾಂಡೋಮ್ ಮಾರಾಟ ಯಂತ್ರವನ್ನ ಸ್ಥಾಪನೆ ಮಾಡಲಾಗಿತ್ತು.
ಫ್ರಾನ್ಸ್ನಲ್ಲಿ ಕೈಗೊಳ್ಳಲಾದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲ ನೆಟ್ಟಿಗರು ಹದಿಹರೆಯದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಸೂಕ್ತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಫ್ರಾನ್ಸ್ನಲ್ಲಿ ಬಹುತೇಕ ಎಲ್ಲ ಕಡೆ ಕಾಂಡೋಮ್ ಯಂತ್ರ ಲಭ್ಯವಿದೆ. ಗರ್ಭಧಾರಣೆಯ ವಿರುದ್ಧದ ಜಾಗೃತಿಗಾಗಿ ಬೇರೆ ಏನಾದರೂ ಸೂಕ್ತ ಕ್ರಮ ಹುಡುಕಬಹುದಿತ್ತು ಎಂದು ಹೇಳಿದ್ದಾರೆ. ಇನ್ನೂ ಹಲವರು ಫ್ರಾನ್ಸ್ 2021ರ ಬದಲಾಗಿ 3021ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತ ಭಾರತೀಯರು ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಫ್ರಾನ್ಸ್ನ ಪ್ರೌಢ ಶಾಲೆಗಳಲ್ಲಿ ಕಾಂಡೋಮ್ ವಿತರಣಾ ಯಂತ್ರಗಳನ್ನ ಇಟ್ಟಂತೆಯೇ ಭಾರತದ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳ ವ್ಯವಸ್ಥೆ ಸಮರ್ಪಕವಾಗಿ ಸಿಗುವಂತೆ ಮಾಡಿ ಎಂದು ಹೇಳಿದ್ದಾರೆ.
https://twitter.com/UberFacts/status/1377174830965956617