ಸಾಕು ಪ್ರಾಣಿಗಳು ಮನೆಯಲ್ಲಿ ಇದ್ದರೆ ಸಮಯ ಸಾಗೋದೇ ಗೊತ್ತಾಗೋದಿಲ್ಲ. ಆದರೆ ಒಮ್ಮೊಮ್ಮೆ ಇದೇ ಪ್ರಾಣಿಗಳ ಚೇಷ್ಟೆ ಬುದ್ಧಿ ಮಾಲೀಕರಿಗೆ ಕಿರಿಕಿರಿಯುಂಟು ಮಾಡಬಲ್ಲದು.
ಮಲೇಷ್ಯಾದ ಅತೀಫ್ ಆಡ್ಲಾನ್ ಬಿನ್ ಮೊಹಮ್ಮದ್ ಹನಾಫಿಯಾ ಎಂಬವರು ಪದವಿ ಶಿಕ್ಷಣವನ್ನ ಪೂರ್ತಿ ಮಾಡಿದ್ದರು. ಜುಲೈನಲ್ಲಿ ಪದವಿ ಪೂರ್ತಿ ಮಾಡಿದ್ದ ಮೊಹಮ್ಮದ್ ಕೆಲ ದಿನಗಳ ಹಿಂದಷ್ಟೇ ಪ್ರಮಾಣ ಪತ್ರವನ್ನ ಪಡೆದಿದ್ದರು. ಆದರೆ ಅವರ ಪದವಿ ಪತ್ರವನ್ನ ಮುದ್ದಾದ ಬೆಕ್ಕಿನ ಮರಿ ಹರಿದು ಚೂರು ಚೂರು ಮಾಡುವ ಮೂಲಕ ದೊಡ್ಡ ಶಾಕ್ ನೀಡಿದೆ.
ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಮೊಹಮ್ಮದ್ ನಮ್ಮ ಮನೆಯಲ್ಲಿ ಅನುಪಯುಕ್ತ ಕಾಗದಗಳು ಇದ್ದರೂ ಸಹ ನನ್ನ ಬೆಕ್ಕಿಗೆ ನನ್ನ ಪ್ರಮಾಣ ಪತ್ರವೇ ಬೇಕಾಯ್ತು ಎಂದು ಬರೆದಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಬೆಕ್ಕಿನ ಚೇಷ್ಟೆ ಬುದ್ಧಿಯನ್ನ ಕಂಡು ನಕ್ಕಿದ್ದಾರೆ.