ಮಲ, ಮೂತ್ರ ವಿಸರ್ಜನೆಗೆ ಅರ್ಜೆಂಟ್ ಆಯ್ತು ಅಂದರೆ ಶೌಚಾಲಯಕ್ಕೆ ಹೋಗದೇ ಬೇರೆ ದಾರಿಯಿಲ್ಲ. ನೀವು ಯಾವುದೇ ಮಹತ್ವದ ಕೆಲಸ ಮಾಡುತ್ತಿದ್ದರೂ ಸಹ ಇವೆರಡು ಕಾರ್ಯಕ್ಕೆ ಹೋಗದೇ ಬೇರೆ ವಿಧಿ ಇರೋದಿಲ್ಲ.
ಇದೇ ರೀತಿ ಜಪಾನ್ನಲ್ಲಿ ಬುಲೆಟ್ ಟ್ರೈನ್ ಓಡಿಸುತ್ತಿದ್ದ ಚಾಲಕನೂ ಸಹ ಶೌಚಕ್ಕೆ ಅರ್ಜೆಂಟ್ ಆಯ್ತು ಅಂತಾ ತುರ್ತು ನಿರ್ಗಮನ ಹೊಂದಿದ್ದಾನೆ.
ಇದೊಂದು ಕಾರಣಕ್ಕಾಗಿ ಗಂಟೆಗೆ 150 ಕಿಲೋಮೀಟರ್ ಓಡುತ್ತಿದ್ದ ರೈಲು ತುರ್ತು ವಿರಾಮ ಪಡೆದಿದೆ.
ಟೊಕ್ಯಾಡೋ – ಶಿಂಕಸೇನ್ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ವೇಳೆ ಹಿಕರಿ 633 ಟ್ರೇನ್ನಲ್ಲಿದ್ದ ಚಾಲಕನಿಗೆ ಶೌಚಕ್ಕೆ ತುರ್ತಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡಲೇ ಚಾಲಕ ನಿರ್ವಾಹಕನ ಬಳಿ ರೈಲನ್ನ ಸ್ವಲ್ಪ ಕಾಲ ನೋಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ನಿರ್ವಾಹಕನ ಬಳಿ ಪರವಾನಿಗಿ ಇಲ್ಲದ ಕಾರಣ ರೈಲನ್ನೇ ನಿಲ್ಲಿಸಬೇಕಾದ ಪ್ರಸಂಗ ಎದುರಾಗಿದೆ.
ಚಾಲಕನಿಗೆ ಹೊಟ್ಟೆ ನೋವು ಶುರುವಾದ ಕಾರಣ ರೈಲನ್ನ ಅರ್ಧದಲ್ಲೇ ನಿಲ್ಲಿಸಿ ಚಾಲಕ ಮಲ ವಿಸರ್ಜನೆಗೆ ತೆರಳಿದ್ರು ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬುಲೆಟ್ ಟ್ರೇನಿನಲ್ಲಿ 160 ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು ಎನ್ನಲಾಗಿದೆ. ಇದಾದ ಬಳಿಕ ಬುಲೆಟ್ ಟ್ರೇನ್ನ್ನು ಚಾಲಕ ಸುರಕ್ಷಿತವಾಗಿ ನಿಲ್ದಾಣ ತಲುಪಿಸಿದ್ದಾರೆ.