ಪ್ರತಿ ಬಾರಿ ನೋಡಿದಾಗಲೂ ಚಂದ್ರ ಹಿಂದಿನದ್ದಕ್ಕಿಂತಲೂ ಸಣ್ಣದಾಗಿ ಕಾಣುತ್ತಾನೆ. ನಿಮ್ಮ ಕಲ್ಪನೆ ವೈಜ್ಞಾನಿಕವಾಗಿ ಸತ್ಯ. ಪ್ರತಿ ವರ್ಷ ಚಂದ್ರ ತನ್ನ ಕಕ್ಷೆ ಬಿಟ್ಟು ಭೂಮಿಯಿಂದ ದೂರ ಸರಿಯುತ್ತಿದ್ದಾನೆ.
ಅದನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಅಂತರ ಅತಿ ಕಡಿಮೆ ಅಂದರೆ, 1.5 ಇಂಚ್ ಮಾತ್ರ. ಆದರೆ, ಶನಿ ಗ್ರಹದ ಚಂದ್ರ ಮೊದಲಿಗಿಂತ ನೂರು ಪಟ್ಟು ವೇಗವಾಗಿ ದೂರ ಸರಿಯುತ್ತಿದ್ದಾನೆ ಎಂದು ನಾಸಾದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾಸಾದ ಬಾಹ್ಯಾಕಾಶ ನೌಕೆ ಕಾಸಿನಿ ಮೂಲಕ ಇದನ್ನು ಅಧ್ಯಯನ ನಡೆಸಲಾಗಿದ್ದು, ಶನಿಯ ಚಂದ್ರ ಪ್ರತಿ ವರ್ಷ 4 ಇಂಚು ಸರಿಯುತ್ತಿದ್ದಾನೆ ಎಂಬುದರ ಡೇಟಾವನ್ನು ಕಂಡು ಹಿಡಿದಿದ್ದಾರೆ. ಇದು ಗ್ರಹಗಳ ವಯಸ್ಸನ್ನು ಅರಿಯಲು ಅನುಕೂಲವಾಗಲಿದೆ. ಶನಿ ಹಾಗೂ ಅದರ ಸುತ್ತಲು ರಚಿತವಾಗಿರುವ ವೃತ್ತ ಯಾವಾಗ ರಚನೆಯಾಯಿತು ಎಂದು ತಿಳಿಯಲು ಅನುಕೂಲವಾಗುತ್ತದೆ.
ವಿಜ್ಞಾನಿಗಳ ಪ್ರಕಾರ ಶನಿ ಗ್ರಹ 4.6 ಬಿಲಿಯನ್ ವರ್ಷಗಳ ಹಿಂದೆ ರಚನೆಯಾಯಿತು. ಸೌರ ಮಂಡಲದ ಪ್ರಾರಂಭದ ದಿನಗಳಲ್ಲಿ, 80 ಉಪಗ್ರಹಗಳು ಹಾಗೂ ಸುತ್ತಲಿನ ವೃತ್ತಗಳು ರಚನೆಯಾದವು. ಈಗ ಎಷ್ಟಿದೆ ಎಂಬುದು ಅನಿಗದಿತವಾಗಿವೆ. ಸದ್ಯ ಟೈಟಾನ್ ಶನಿಯಿಂದ 750 ಸಾವಿರ ಮೈಲು(1.2 ಮಿಲಿಯನ್ ಕಿಮೀ) ದೂರದಲ್ಲಿದೆ. ಹೊಸ ಮಾನದಂಡದಂತೆ ಚಂದ್ರ, ಶನಿಗೆ ಮೊದಲಿಗಿಂತ ಹೆಚ್ಚು ಹತ್ತಿರವಾಗುತ್ತಿದ್ದಾನೆ.