ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್ ಲ್ಯಾಪ್ಸ್ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ ಸೇರಿದಂತೆ ಅನೆಕ ವಿಸ್ಮಯಕಾರಿ ಚಿತ್ರಗಳನ್ನು ನಾಸಾ ಹಂಚಿಕೊಳ್ಳುತ್ತಲೇ ಇರುತ್ತದೆ.
ಭೂಮಂಡಲದ ಮೇಲಿನ ಅತ್ಯಂತ ಉದ್ದವಾದ ನದಿಯಾದ ನೈಲ್‌ನ ಚಿತ್ರವನ್ನು ನಾಸಾ ಶೇರ್ ಮಾಡಿಕೊಂಡಿದೆ. ಇರುಳಿನಲ್ಲಿ ನೈಲ್ ನದಿ ತೀರದ ಊರುಗಳು ಹೇಗೆ ಕಾಣುತ್ತವೆ ಎಂದು ತೋರುವ ಈ ಚಿತ್ರವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸೆರೆ ಹಿಡಿಯಲಾಗಿದೆ.
ನಾಸಾದ ಗಗನಯಾತ್ರಿ ಕ್ರಿಸ್ ಕ್ಯಾಸಿಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಫ್ರಿಕಾ ಖಂಡದ ಈಶಾನ್ಯದ ದಿಕ್ಕಿನೆಡೆಗೆ ಹರಿದುಕೊಂಡು ಹೋಗುವ ನೈಲ್ ನದಿ ಈ ಚಿತ್ರವು ಮೊದಲ ನೋಟಕ್ಕೆ ಪಟಾಕಿ ಸ್ಫೋಟದಂತೆ ಕಾಣುತ್ತದೆ.