ಭೂಮಂಡಲದ ಮೇಲಿರುವ ಅತ್ಯಂತ ದುಬಾರಿ ಪ್ರದೇಶಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಲಂಡನ್ ನಲ್ಲಿ ಬಾಡಿಗೆ ದರಗಳು ಬಹಳ ದುಬಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕೇವಲ 5 ಅಡಿ 5 ಇಂಚು ಅಗಲವಿರುವ ಲಂಡನ್ನ ಮನೆಯೊಂದು ಮಾರಾಟಕ್ಕಿದ್ದು, ಅದರ ಬೆಲೆ ಒಂದು ದಶಲಕ್ಷ ಪೌಂಡ್ಗಿಂತಲೂ ಹೆಚ್ಚಾಗಿದೆ.
ಲಂಡನ್ನ ಅತ್ಯಂತ ಕಿರಿದಾದ ಮನೆಯಾಗಿರುವ ಈ ಆಸ್ತಿಯು ಈ ಹಿಂದೆ ಹ್ಯಾಟ್ ಶಾಪ್ ಆಗಿದ್ದು, ಅದರ ಮುಂಭಾಗಕ್ಕೆ ನೀಲಿ ಬಣ್ಣ ಲೇಪಿಸಲಾಗಿದೆ. 24 ಅಡಿ ಉದ್ದವಿರುವ ಈ ಮನೆಯು ಟೆನಿಸ್ ಕೋರ್ಟ್ನ ಅರ್ಧದಷ್ಟಿದೆ. ಈ ಮನೆಗೆ ಐದು ಅಂತಸ್ತುಗಳಿವೆ.
ಸುದ್ದಿ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ಈ ಮನೆಯನ್ನು 2009ರಲ್ಲಿ ವಕೀಲರೊಬ್ಬರು £595,000 ತೆತ್ತು ಖರೀದಿ ಮಾಡಿದ್ದರು. ಅವರೀಗ ವಿದೇಶಕ್ಕೆ ಹೋಗುತ್ತಿರುವ ಕಾರಣ ಈ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ 2006ರಲ್ಲಿ ಇದೇ ಮನೆಯನ್ನು £488,500ಕ್ಕೆ ಮಾರಾಟ ಮಾಡಲಾಗಿತ್ತು.