ಸಾಮಾಜಿಕ ಜಾಲತಾಣಗಳಲ್ಲಂತೂ ಪ್ರತಿನಿತ್ಯ ಏನಾದರೊಂದು ವಿಸ್ಮಯಕಾರಿ ಸಂಗತಿಗಳು ಶೇರ್ ಆಗುತ್ತಲೇ ಇರುತ್ತವೆ. ಅದರಲ್ಲೂ ತಿಂಗಳಿಗೊಮ್ಮೆಯಾದರೂ UFOಗಳ ಬಗ್ಗೆ ಏನಾದರೊಂದು ಮಾತುಕತೆ ಆಗುತ್ತಲೇ ಇರಬೇಕು.
ಅಮೆರಿಕದ ನಗರವೊಂದರ ಆಗಸದಲ್ಲಿ ಹಾಡಹಗಲೇ ನಿಗೂಢವಾದ ಫ್ಲಾಶ್ ಲೈಟ್ ಗಳು ತೇಲಾಡುತ್ತಿರುವ ಚಿತ್ರಗಳು ಕಂಡುಬಂದಿದ್ದು, ಮತ್ತೊಮ್ಮೆ UFOಗಳ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿವೆ.
ದಕ್ಷಿಣ ಕರೋಲಿನಾದ ಸ್ಪಾರ್ತನ್‌ಬರ್ಗ್‌ನ ಹ್ಯಾಲೆ ಕಮ್ಮಿನ್ಸ್ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕೂಟವೊಂದನ್ನು ಆಯೋಜಿಸಿದ್ದ ವೇಳೆ ಕಂಡುಬಂದ ಇವುಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಆನ್ಲೈನ್ ಸಮುದಾಯದೊಂದಿಗೆ ಹಂಚಿಕೊಂಡಿದ್ದಾರೆ. ಮೋಡಗಳ ನಡುವೆ ಬೆಳಕಿನ ಚಿತ್ತಾರ ಮೂಡಿ ಬರುತ್ತಿದ್ದು, ವಿವಿಧ ರೀತಿಯ ಪ್ಯಾಟರ್ನ್‌ಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.