ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ.
ಇಲ್ಲೊಬ್ಬ ತಾಯಿ ತಾನು ಪ್ರವಾಸಕ್ಕೆ ಹೊರಟ ವೇಳೆ ತನ್ನ ಮಗಳ ಕ್ಷೇಮದ ಬಗ್ಗೆ ಬಹಳ ಚಿಂತಿತರಾಗಿ, ’ತುರ್ತು ಪರಿಸ್ಥಿತಿ ಬಂದಾಗ ಯಾರಿಗೆಲ್ಲಾ ಕರೆ ಮಾಡಬೇಕು’ ಎಂಬ ಪಟ್ಟಿಯೊಂದನ್ನು ಕೊಟ್ಟು ಕಳುಹಿಸಿದ್ದಾರೆ. ತನ್ನ ಪತಿಯೊಂದಿಗೆ ಪ್ರವಾಸಕ್ಕೆ ಹೊರಡುವ ವೇಳೆ ಮಗಳಿಗೆ ಆಕೆಯ ತಾಯಿ ಹೀಗೆ ಪತ್ರ ಬರೆದುಕೊಟ್ಟಿದ್ದಾರೆ.
196 ದೇಶದ ಹೆಸರು, ಕರೆನ್ಸಿ ಫಟಾಫಟ್ ಹೇಳ್ತಾಳೆ ಈ ಹುಡುಗಿ
ಈ ಪಟ್ಟಿಯನ್ನು ಕಂಡ ತಂದೆ, ಈ ಪಟ್ಟಿಯ ವಿಡಿಯೋವೊಂದನ್ನು ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಒಂದು ವೇಳೆ ತನ್ನ ಮಗಳೇನಾದರೂ ಆತಂಕದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ ಯಾರಿಗೆ ಕರೆ ಮಾಡಬೇಕು ಎಂಬ ಪಟ್ಟಿಯನ್ನು ಈ ತಾಯಿ ಸವಿವರವಾಗಿ ಬರೆದಿದ್ದಾರೆ.
“ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಕಾಲೇಜಿನಿಂದ ಮನೆಗೆ ಬಂದ ನಮ್ಮ ಮಗಳಿಗೆ ನನ್ನ ಮಡದಿ ಏನೆಲ್ಲಾ ಪಟ್ಟಿ ಮಾಡಿದ್ದಾಳೆ ಎಂದು ನೋಡಿದೆ. ನಾವು ಪ್ರವಾಸಕ್ಕೆ ಹೋದ ವೇಳೆ ಯಾರಿಗೆಲ್ಲಾ ಕರೆ ಮಾಡಬೇಕು ಎಂಬ ಪಟ್ಟಿ ಮಾಡಿದ್ದಾಳೆ. ಆದರಲ್ಲಿ ನಾವು ಇಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಒಂದಷ್ಟು ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.