ಶಾಲೆಗೆ ಚಕ್ಕರ್ ಹೊಡೆಯುವುದು ಯಾವ ವಿದ್ಯಾರ್ಥಿಗೆ ತಾನೇ ಇಷ್ಟವಿಲ್ಲ ಹೇಳಿ…? ಏನೇನೋ ಸಬೂಬು ಹೇಳಿಕೊಂಡು ಕ್ಲಾಸ್‌ಗೆ ಗೈರು ಹಾಜರಾಗಲು ಮಕ್ಕಳು ನೋಡುತ್ತಲೇ ಇರುತ್ತಾರೆ.
ಆದರೆ ಓಹಿಯೋದ ಬ್ಲೇಕ್ ವೋಲ್ಫೆ ಹೆಸರಿನ ವಿದ್ಯಾರ್ಥಿನಿಯೊಬ್ಬಳು ಈ ವಿಚಾರದಲ್ಲಿ ಅಸಾಧಾರಣವಾದದ್ದನ್ನೇ ಸಾಧಿಸಿದ್ದಾಳೆ. ಕಿಂಡರ್ ಗಾರ್ಟನ್ ಮಟ್ಟದಿಂದ ಪ್ರೌಢಶಾಲಾ ಮಟ್ಟಕ್ಕೆ ಈಕೆ ಒಂದೇ ಒಂದು ದಿನ ಶಾಲೆಗೆ ತಪ್ಪಿಸಿಕೊಂಡಿಲ್ಲ!
ಮನೆಗೆ ನಾಯಿ ತರುವ ಮುನ್ನ ಇರಲಿ ಈ ಎಚ್ಚರ…..!
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಹುಶಾರಿಲ್ಲ ಎಂಬ ಕಾರಣಕ್ಕೂ ಸಹ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದ ವೋಲ್ಫೆ ತನ್ನ ಶಾಲಾ ಜೀವನದ 2,184 ದಿನಗಳಲ್ಲಿ 100% ಹಾಜರಾತಿ ಕಾಯ್ದುಕೊಂಡಿದ್ದಾಳೆ.
ಮನೆಯಲ್ಲೇ ಕುಳಿತು ಪಡೆಯಿರಿ ಪಿವಿಸಿ ಆಧಾರ್ ಕಾರ್ಡ್
“ಕೆಲವೊಮ್ಮೆ ಕಾರಣಗಳನ್ನು ಕೊಟ್ಟು ಮನೆಯಲ್ಲೇ ಉಳಿದುಕೊಳ್ಳಬೇಕು ಎಂದು ಕೆಲ ದಿನಗಳು ಅನಿಸಿದ್ದು ಇವೆ. ಆದರೆ ನನ್ನ ಅಪ್ಪ ಮತ್ತು ಅಮ್ಮ ಒತ್ತಾಸೆಯಾಗಿ ನಿಂತಿದ್ದಲ್ಲದೇ, ಶಾಲೆಗೆ ಬಂದು ನನ್ನ ಸ್ನೇಹಿತರನ್ನು ನೋಡುವ ಆಸೆ ಎಲ್ಲವನ್ನೂ ಇನ್ನೂ ಚೆನ್ನಾಗಿ ಕಾಣುವಂತೆ ಮಾಡಿದವು” ಎಂದು ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ವೋಲ್ಫೆ ಹೇಳಿಕೊಂಡಿದ್ದಾಳೆ.